ಪುತ್ತೂರು : ವಿದ್ಯುತ್ ಸ್ಪರ್ಶ: ಯುವಕ ಮೃತ್ಯು..!!
ಪುತ್ತೂರು ಯುವಕನೋರ್ವ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಕುಮಾರಧಾರ ನದಿ ತೀರದ ಬಳಿ ನಡೆದಿದೆ.
ಶರೀಫುದ್ದೀನ್ (19) ಮೃತ ಯುವಕ.ಈ ಬಗ್ಗೆ ಶರೀಫುದ್ದೀನ್ ರವರ ಸಂಬಂಧಿಯೋರ್ವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪುಕರಣ ದಾಖಲಾಗಿದೆ.
ಹಮ್ಮಬ್ಬ ರವರ ತಂಗಿ ಹಾಗೂ ಮಗ ಅವರ ಮಗ ಶರೀಪುದೀನ್ (19) ಎಂಬವರು ಹಮ್ಮಬ್ಬ ರವರ ಮನೆಯಲ್ಲಿ ಇದ್ದು, ಹಮ್ಮಬ್ಬ ರವರ ಅಳಿಯ ಶರೀಪುದೀನ್ (19) ಎಂಬಾತನು ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಮೇ.21 ರಂದು ಹಮ್ಮಬ್ಬ ರವರಿಗೆ ಸಂಜೆ ಸಾರ್ವಜನಿಕರ ಮೂಲಕವಾಗಿ ಅಳಿಯ ಶರೀಪುದ್ದೀನ್ ರವರಿಗೆ ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಕುಮಾರಧಾರ ನದಿ ಕಿನಾರೆಯ ಬಳಿ ವಿದ್ಯುತ್ ಸ್ಪರ್ಶವಾಗಿ ಅಸ್ವಸ್ಥಗೊಂಡವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿ ನೋಡಿದಾಗ ಅಳಿಯ ಶರೀಪುದೀನ್ ಮೃತಪಟ್ಟಿದ್ದು ಆತನ ಎದೆಯ ಭಾಗದಲ್ಲಿ ವಿದ್ಯುತ್ ಸ್ಪರ್ಶ ಆಗಿರುವುದು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.