ಪುಂಜಾಲಕಟ್ಟೆ : ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಓಮ್ನಿ! ಒಬ್ಬರಿಗೆ ಗಾಯ ; ನಾಲ್ವರು ಅಪಾಯದಿಂದ ಪಾರು

ಪುಂಜಾಲಕಟ್ಟೆ : ಬೆಳಗಿನ ಜಾವ 7:00 ಸುಮಾರಿಗೆ ಪುಂಜಾಲ್ ಕಟ್ಟೆಯ ಪೊಲೀಸ್ ಸ್ಟೇಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಮ್ನಿ ಕಾರು ಪುಂಜಾಲಕಟ್ಟೆಯಿಂದ ಬಂಟ್ವಾಳ ಕಡೆಗೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಒಮ್ನಿ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಬಂಟ್ವಾಳ: ಬಿ.ಸಿ.ರೋಡು ಹೃದಯ ಭಾಗದಲ್ಲಿ ಕ್ಯಾಂಟೀನ್ ಅಗ್ನಿಗಾಹುತಿ-ಅಪಾರ ನಷ್ಟ:
ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಕ್ಯಾಂಟೀನ್ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಸೊತ್ತುಗಳು ಸಂಪೂರ್ಣ ಅಗ್ನಿಗಾಹುತಿಯಾಗಿವೆ.
ಇಲ್ಲಿನ ಬಸ್ ನಿಲ್ದಾಣ ಬಳಿಯ ಸಣ್ಣ ಕ್ಯಾಂಟೀನ್ ಒಂದರಲ್ಲಿ ರಾತ್ರಿ ಸುಮಾರು 7.30ರ ವೇಳೆ ಬೆಂಕಿ ಕಾಣಿಸಿಕೊಂಡಿದ್ದನ್ನು ಹತ್ತಿರದ ಮನೆಯವರು ನೋಡಿ ಆತಂಕದಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸಾರ್ವಜನಿಕರು ಬೆಂಕಿ ನಂದಿಸಿದ್ದು, ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿದೆ. ಕಲ್ಲಡ್ಕದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಆಗಮಿಸುವುದು ತಡವಾದರೂ ಬಳಿಕ ಕಾರ್ಯಾಚರಣೆ ನಡೆಸಿದರು. ಘಟನೆಯಲ್ಲಿ ಅಪಾರ ಪ್ರಮಾಣದ ಸೊತ್ತುಗಳು ನಾಶವಾಗಿದೆ.