ಪತ್ನಿ ಜೊತೆ ಅಕ್ರಮ ಸಂಬಂಧ: ಯುವಕನ ಭೀಕರ ಹತ್ಯೆ, ದೇಹ 12 ತುಂಡು!!
ನವದೆಹಲಿ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮತ್ತು ದೇಹ ತುಂಡರಿಸಿದ ಘಟನೆ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ಇಂತಹುದೇ ಮತ್ತೊಂದು ಘಟನೆ ವರದಿಯಾಗಿದೆ.
ಹೌದು.. ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ ಆರೋಪದ ಮೇರೆಗೆ ವ್ಯಕ್ತಿಯೋರ್ವ ಯುವಕನನ್ನು ಕೊಂದು ದೇಹವನ್ನು 12 ತುಂಡುಗಳಾಗಿ ಕತ್ತರಿಸಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ಬೆಳಕಿಗೆ ಬಂದಿದೆ.
ಆರೋಪಿಗಳು ಮೃತ ದೇಹವನ್ನು 12 ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿ ನದಿ ದಡದಲ್ಲಿ ಎಸೆದು ಪರಾರಿಯಾಗಿದ್ದಾರೆ. ಆರೋಪಿ ರಿಕ್ಷಾ ಚಾಲಕನನ್ನು ಪೊಲೀಸರು ಇದೀಗ ಬಂಧಿಸಿದ್ದು, ಕೊಲೆಯಲ್ಲಿ ರಿಕ್ಷಾ ಚಾಲಕನ ಸಂಬಂಧಿಯೂ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಖೋಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಗೋಣಿಚೀಲದಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಚೀಲದ ಒಳಗಿನಿಂದ ಕೆಲವು ಅಂಗಗಳು ಹೊರಬಂದಿದ್ದವು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಯುವಕನೊಬ್ಬನ ಶವ ಸುಮಾರು 12 ತುಂಡುಗಳಾಗಿ ತುಂಡಾಗಿತ್ತು. ಮೃತನನ್ನು ಅಕ್ಷಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ರಾಜಸ್ಥಾನದ ಜೈಪುರ ಜಿಲ್ಲೆಯ ಕೊಟ್‌ಪುಟ್ಲಿ ನಿವಾಸಿ ಎಂದು ಡಿಸಿಪಿ ದೀಕ್ಷಾ ಶರ್ಮಾ ತಿಳಿಸಿದ್ದಾರೆ.
ತನಿಖೆ ನಡೆಸಿದ್ದ ಪೊಲೀಸರು ಜನವರಿ 19 ಅಥವಾ 20ರ ರಾತ್ರಿ ಅಕ್ಷಯ್‌ನನ್ನು ಕೊಲೆ ಮಾಡಲಾಗಿದೆ ಎಂದು ಪತ್ತೆ ಮಾಡಿದ್ದು, ಬಳಿಕ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ್ದರು. ತನಿಖೆಯಲ್ಲಿ, ಮೃತರು ಕೊನೆಯದಾಗಿ ಆದರ್ಶ ಕಾಲೋನಿ ಖೋಡಾದಲ್ಲಿ ವಾಸಿಸುವ ರಿಕ್ಷಾ ಚಾಲಕ ಮೀಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದ. ಪೊಲೀಸರು ಮೀಲಾಲ್‌ನನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ, ಅವನು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.
ಅಕ್ಷಯ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿ ಮಿಲಾಲ್ ಹೇಳಿದ್ದಾನೆ. ತನ್ನ ಪತ್ನಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ ಅಕ್ಷಯ್ ನನ್ನು ಹಲವು ಬಾರಿ ಹಿಡಿದಿದ್ದಾನೆ. ಮೃತ ಅಕ್ಷಯ್ ಮೂರು ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ನೆಲೆಸಿದ್ದ. ಆ ಸಮಯದಲ್ಲಿ ಮೀಲಾಲ್ ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಆರೋಪಿಗಳು ಅಕ್ಷಯ್ ನನ್ನು ಜೈಪುರದಿಂದ ಗಾಜಿಯಾಬಾದ್ ಗೆ ಕರೆದೊಯ್ದು ಪತ್ನಿಗೆ ಕರೆ ಮಾಡಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಕಾಲುವೆಯ ದಂಡೆಗೆ ಎಸೆದಿದ್ದಾರೆ.