ಪಂದ್ಯದ ಬಳಿಕ ಬೌಲರ್ಗಳ ಮೈಚಳಿ ಬಿಡಿಸಿದ ಎಂಎಸ್ ಧೋನಿ
ಚೆನ್ನೈ: ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಪಂದ್ಯದಲ್ಲಿ ಗೆದ್ದು ಗೆಲುವಿನ ಹಳಿಗೆ ಮರಳಿದೆ. ನಾಲ್ಕು ವರ್ಷಗಳ ಬಳಿಕ ತವರಿನ ಅಂಗಳದಲ್ಲಿ ಆಡಿದ ಮಹೇಂದ್ರ ಸಿಂಗ್ ಧೋನಿ ಪಡೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್ ಅಂತರದ ಗೆಲುವು ಸಾಧಿಸಿತು.
ಆದರೆ ಪಂದ್ಯದ ಬಳಿಕ ತಂಡದ ಬೌಲರ್ ಗಳ ಮೇಲೆ ನಾಯಕ ಎಂ ಎಸ್ ಧೋನಿ ಹರಿಹಾಯ್ದರು. ಪಂದ್ಯದ ಬಳಿಕ ಮಾತನಾಡಿದ ಅವರು, ವೇಗದ ಬೌಲಿಂಗ್ ನಲ್ಲಿ ನಾವು ಸುಧಾರಣೆ ಮಾಡಬೇಕಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೌಲ್ ಮಾಡಬೇಕಾಗುತ್ತದೆ. ಎದುರಾಳಿ ಬೌಲರ್ ಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಇನ್ನೊಂದು ವಿಷಯವೆಂದರೆ ಅವರು ಅಷ್ಟೊಂದು ನೋ-ಬಾಲ್ ಅಥವಾ ಹೆಚ್ಚುವರಿ ವೈಡ್ಗಳನ್ನು ಬೌಲ್ ಮಾಡಬಾರದು ಅಥವಾ ಅವರು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಇದು ನನ್ನ ಎರಡನೇ ಎಚ್ಚರಿಕೆ ಇಲ್ಲದಿದ್ದರೆ ನಂತರ ನಾನು ಹೊರಗೆ ಉಳಿಯ ಬೇಕಾಗುತ್ತದೆ” ಎಂದು ಅವರು ಹೇಳಿದರು.
ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ನೋಡಿ ಧೋನಿ ಕೂಡ ಅಚ್ಚರಿ ಮೂಡಿಸಿದ್ದರು. “ಇದೊಂದು ಸೊಗಸಾದ ಆಟ, ಹೈ ಸ್ಕೋರಿಂಗ್ ಆಟ. ನಾವೆಲ್ಲರೂ ವಿಕೆಟ್ ಹೇಗೆ ಎಂದು ಯೋಚಿಸುತ್ತಿದ್ದೆವು. ನಮಗೆ ಆ ಅನುಮಾನವಿತ್ತು. ಇದು ಹೆಚ್ಚು ಸ್ಕೋರಿಂಗ್ ಆಟವಾಗಿತ್ತು” ಎಂದು ಧೋನಿ ಹೇಳಿದರು.
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳು ಈ ಪಂದ್ಯದಲ್ಲಿ ಮೂರು ನೋ ಬಾಲ್ ಮತ್ತು 13 ವೈಡ್ ಗಳನ್ನು ಎಸೆದರು.
#CSK bowlers today bowled 13 wides and 3 no balls against #LSG and Captain @msdhoni, in his inimitable style, had this to say. ??#TATAIPL | #CSKvLSG pic.twitter.com/p6xRqaZCiK
— IndianPremierLeague (@IPL) April 3, 2023