ಬುಧವಾರ, ಜನವರಿ 22, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಮ್ಮ ಅಮ್ಮ ಮಾಡೋ ಬಿಸಿ ಬಿಸಿ ಜೋಳದ ರೊಟ್ಟಿ ನನಗೆ ತುಂಬಾ ಇಷ್ಟ– ಸಿಎಂ!

Twitter
Facebook
LinkedIn
WhatsApp
ರಾಜ್ಯದಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರ ಆರಂಭ‌ಕ್ಕೆ ರಾಜ್ಯ ಸರ್ಕಾರ ನಿರ್ಧಾರ

ಸದಾ ಕೆಲಸದಲ್ಲಿ ನಿರತರಾಗಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಚ ಬಿಡುವಿನಲ್ಲಿ ಮಕ್ಕಳೊಂದಿಗೆ ಮಗುವಾಗಿರುವುದು ಕಾರ್ಯಕ್ರಮವೊಂದರಲ್ಲಿ ಕಂಡುಬಂದಿದೆ.
ಜೀ ಕನ್ನಡದ 15ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಿಎಂ ಮಕ್ಕಳು ಕೇಳುವ ಮುದ್ದುಮುದ್ದಾದ ಪ್ರಶ್ನೆಗಳಿಗೆ ಲವಲವಿಕೆಯಿಂದ ಉತ್ತರ ಕೊಟ್ಟಿದ್ದಾರೆ. ಬೊಮ್ಮಾಯಿ ಅವರ ಉತ್ತರಕ್ಕೆ ಕಾರ್ಯಕ್ರಮದಲ್ಲಿ ನೆರೆದವರೆಲ್ಲಾ ನಗಾಡಿದ್ದಾರೆ.
ಅಂಕಲ್​ ನಿಮ್ಮ ಅಮ್ಮ ಮಾಡುವ ಯಾವ ಅಡುಗೆ ನಿಮಗೆ ಹೆಚ್ಚು ಇಷ್ಟ? ಬಾಲಕಿಯೊಬ್ಬಳು ಕೇಳಿದ್ದಕ್ಕೆ ಸಿಎಂ, ‘ನಮ್ಮ ತಾಯಿ ಬಿಸಿಬಿಸಿ ಜೋಳದ ರೊಟ್ಟಿ ಮಾಡುತ್ತಿದ್ದರು. ಅದು ನನಗೆ ಬಹಳ ಇಷ್ಟ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನಲು ಶುರುಮಾಡಿದರೆ ಲೆಕ್ಕವೇ ಇರುವುದಿಲ್ಲ. ಆದರೆ ಈಗ ನಮ್ಮ ತಾಯಿ ಇಲ್ಲ. ಈಗ ಯಾರೇ ಬಿಸಿ ರೊಟ್ಟಿ ಮಾಡಿದರೂ ನಮ್ಮ ತಾಯಿಯೇ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತೇನೆ’ ಎಂದರು.

ಅಂಕಲ್​ ನೀವು ಯಾವಾಗಲೂ ಬ್ಯುಸಿ ಇರ್ತೀರಿ ಅಲ್ವಾ? ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ಹೇಳಿಕೊಡುತ್ತೀರಾ? ಎಂದು ಮತ್ತಬ್ಬರ ಪ್ರಶ್ನೆಗೆ ಸಿಎಂ, ‘ನೋಡು ಮರಿ, ನನಗೆ ಮೊಮ್ಮಗಳು ಇಲ್ಲ. ಆದರೆ ನೀವೆಲ್ಲರೂ ನನ್ನ ಮೊಮ್ಮಕ್ಕಳಿದ್ದಂತೆ. ಹಾಗಾಗಿ ನೀವು ಆನ್​ಲೈನ್​ಗೆ ಬಂದಾಗ ನಾನು ನಿಮಗೆ ಸಿಗುತ್ತೇನೆ. ನಿಮ್ಮನ್ನೆಲ್ಲ ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನಿಸ್ತಾ ಇದೆ. ಇದನ್ನು ನನ್ನ ಮಗನಿಗೆ ಮನವರಿಕೆ ಮಾಡಿಸುತ್ತೇನೆ’ ಎಂದಿದ್ದಕ್ಕೆ ಕಾರ್ಯಕ್ರಮದಲ್ಲಿ ನೆರೆದವರೆಲ್ಲಾ ಬಿದ್ದು ನಗಾಡಿದ್ದಾರೆ.
ನಿಮ್ಮ ಫೇವರಿಟ್​ ಹೀರೋಯಿನ್​ ಯಾರು? ಎನ್ನುವ ಪ್ರಶ್ನೆಗೆ ಸಿಎಂ, ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್​ಟೈಮ್​ ಫೇವರಿಟ್​ ಹೀರೋಯಿನ್​ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್​ 3 ಹೀರೋಯಿನ್​ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್​. ಡಾ. ರಾಜ್​ಕುಮಾರ್​ ಅವರು ನನ್ನ ಆಲ್​ಟೈಮ್ ಫೇವರಿಟ್​ ಹೀರೋ ಎಂದಿದ್ದಾರೆ.
ನೀವು ಯಾವಾಗಲೂ ಮೆಲುಕು ಹಾಕುವ ನಿಮ್ಮ ಫೇವರಿಟ್​ ಹಾಡು ಯಾವುದು? ‘ಹುಟ್ಟಿದರೇ ಕನ್ನಡ ನಾಡಲ್​ ಹುಟ್ಟಬೇಕು..’ ಇದು ನಾನು ಇಷ್ಟಪಟ್ಟ ಹಾಡು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು