ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

'ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ'; ; ವಾಲ್ಮೀಕಿ ಜಾತ್ರೆಗೆ ಗೈರಾದ ಬಗ್ಗೆ ಸುದೀಪ್ ಸ್ಪಷ್ಟನೆ

Twitter
Facebook
LinkedIn
WhatsApp
'ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ'; ; ವಾಲ್ಮೀಕಿ ಜಾತ್ರೆಗೆ ಗೈರಾದ ಬಗ್ಗೆ ಸುದೀಪ್ ಸ್ಪಷ್ಟನೆ

ಕಿಚ್ಚ ಸುದೀಪ್ ಅವರು ಬರುತ್ತಾರೆ ಎಂದು ಭಾವಿಸಿ ಅವರ ಅಭಿಮಾನಿಗಳು ವಾಲ್ಮೀಕಿ ಜಾತ್ರೆಯಲ್ಲಿ ನೆರೆದಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಹಾಜರಿ ಹಾಕಿ ಕಿಚ್ಚ ಸುದೀಪ್ ಎಂದು ಘೋಷಣೆ ಕೂಗುತ್ತಿದ್ದರು. 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಗುರುಪೀಠದ ವಾಕ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ (Kichcha Sudeep) ಅವರು ಗೈರಾಗಿದ್ದರು. ಇದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಲ್ಲಿರುವ ಕುರ್ಚಿಗಳನ್ನು ಒಡೆದು ಹಾಕಿದ್ದರು. ಸುದೀಪ್ ಕಾರ್ಯಕ್ರಮಕ್ಕೆ ಹಾಜರಿ ಹಾಕದೆ ಇರುವುದು ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಈಗ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಬರುತ್ತಾರೆ ಎಂದು ಭಾವಿಸಿ ಅವರ ಅಭಿಮಾನಿಗಳು ವಾಲ್ಮೀಕಿ ಜಾತ್ರೆಯಲ್ಲಿ ನೆರೆದಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಹಾಜರಿ ಹಾಕಿ ಕಿಚ್ಚ ಸುದೀಪ್ ಎಂದು ಘೋಷಣೆ ಕೂಗುತ್ತಿದ್ದರು. ಇದರಿಂದ ಇತರೆ ಕಾರ್ಯಕ್ರಮಕ್ಕೆ ಕಿರಿಕಿರಿ ಆಯಿತು. ವಾಲ್ಮೀಕಿ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಶಾಂತಿಯಿಂದ ಇರುವಂತೆ ಸುದೀಪ್ ಅಭಿಮಾನಿಗಳ ಬಳಿ ಕೋರಿದರು. ಅಲ್ಲದೆ, ಸುದೀಪ್ ಬರುತ್ತಿದ್ದಾರೆ ಎನ್ನುವ ಭರವಸೆ ನೀಡಿದರು. ಕಿಚ್ಚ ಸುದೀಪ್ ಬಾರದ ಕಾರಣ ಅಭಿಮಾನಿಗಳು ದಾಂಧಲೆ ನಡೆಸಿ, ಕುರ್ಚಿಗಳನ್ನು ಪುಡಿಪುಡಿ ಮಾಡಿದರು.

ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ಸ್ನೇಹಿತರಿಗೆ ನಮಸ್ಕಾರ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ, ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಅತೀವ ಆಸೆ . ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ  ನಿಮ್ಮ ಕಿಚ್ಚ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಆಯೋಜಕರಿಂದ ಆಹ್ವಾನ ಇರಲಿಲ್ಲ ಎಂದು ಸುದೀಪ್​ ಟ್ವೀಟ್​ ಮಾಡಿದ ಬೆನ್ನಲ್ಲೇ ಈ ಮೊದಲು ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ನೀಡಲು ಹೋಗಿರುವ ಫೋಟೋ ವೈರಲ್ ಆಗಿದೆ. ಸುದೀಪ್​​ ನಿವಾಸಕ್ಕೆ ಹೋಗಿ ಆಹ್ವಾನ ನೀಡಿದ್ದ ಫೋಟೋ ಇದಾಗಿದೆ. ಸುದೀಪ್ ಮನೆಯಲ್ಲಿ ಇಲ್ಲದ ಕಾರಣ ಅವರ ತಂದೆ ಸಂಜೀವ್ ಕೈಗೆ ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ನೀಡಿದ್ದರು. ಆಹ್ವಾನ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ