![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬೆಂಗಳೂರು: ದಾವೋಸ್ ಪ್ರವಾಸದಿಂದ ವಾಪಸ್ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಯನ್ನು ರಾಜ್ಯದಲ್ಲಿ ಹೂಡಲು ಮುಂದೆ ಬಂದಿವೆ ಎಂದು ಶುಕ್ರವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ, ಪ್ರತಿವರ್ಷ ದಾವೋಸ್ ನಲ್ಲಿ ಆರ್ಥಿಕ ಶೃಂಗ ಸಭೆ ನಡೆಯುತ್ತದೆ. ಹಿಂದೆಯೂ ಅನೇಕ ಸಿಎಂಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್ ನಂತರ ಇಡೀ ವಿಶ್ವದ ಆರ್ಥಿಕತೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ವಿಶ್ವದ ಉದ್ಯಮಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು.
ದಾವೋಸ್ ನಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಮಹತ್ವದ ಚರ್ಚೆ ನಡೆಯಿತು. ಉದ್ಯಮಿಗಳು ಭಾರತಕ್ಕೆ ಆದ್ಯತೆ ನೀಡಿದ್ದು ನೋಡಿದರೆ ಭಾರತ ಒಂದು ಎಮರ್ಜಿಂಗ್ ಎಕಾನಮಿ ಅಂತ ಗೋಚರಿಸುತ್ತದೆ. ಯುರೋಪಿನ ರಾಷ್ಟ್ರಗಳು ಕೊವಿಡ್ ನಿಂದ ಆರ್ಥಿಕ ಸಂಕಷ್ಟ ಎದರಿಸುತ್ತಿದ್ದು, ಚೈನಾದಲ್ಲಿ ಈಗಲೂ ಕೋವಿಡ್ ಮುಂದುವರೆದೆ. ಹೀಗಾಗಿ ಉದ್ಯಮಿಗಳು ಭಾರತದೆ ಕಡೆಗೆ ನೋಡುವಂತೆ ಮಾಡಿದೆ ಎಂದು ಸಿಎಂ ಹೇಳಿದರು.
ಪ್ರಮುಖವಾಗಿ ನವೀಕರಣದ ಇಂಧನದ ಬಗ್ಗೆ ಹೆಚ್ಚುಹೆಚ್ಚು ಹೂಡಿಕೆಗೆ ಅವಕಾಶಗಳು ಚರ್ಚೆಗಳು ನಡೆದಿವೆ. ಭಾರತದಿಂದ ತೆಲಂಗಾಣ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ತಮ್ಮದೇ ಆದ ಪೆವಿಲಿಯನ್ ಹಾಕಿದ್ದವು. ನಮ್ಮ ಪೆವಿಲಿಯನ್ ಗೆ ಬೆಳಗ್ಗೆ 10 ರಿಂದ ರಾತ್ರಿ 10 ರ ವರೆಗೆ ಉದ್ಯಮಿಗಳು ಭೇಟಿ ನೀಡಿಕೆ ಚರ್ಚೆ ನಡೆಸಿದ್ದಾರೆ. ಜುಬಿಲಿಯಂಟ್ ಸಂಸ್ಥೆ 700 ಕೋಟಿ ಹೂಡಲು ತೀರ್ಮಾನ ಮಾಡಿದೆ.
ಹಿಟಾಚಿ ಕಂಪನಿ 2000 ಎಂಜನೀಯರ್ ಗಳಿಗೆ ಉದ್ಯೋಗ ನೀಡಲು ಮುಂದೆ ಬಂದಿದೆ. ಸಿಮೆನ್ಸ್ ಕಂಪನಿ 1300 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ. ಯ್ಯೂರೊ ಗ್ರುಪ್ ನವರು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಂಪನಿ ಸ್ಥಾಪಿಸಲು ಮನವಿ ಮಾಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಅಲ್ಲದೆ, ನೆಸ್ಟ್ಲೆ ಕಂಪನಿಯವರು 700 ಕೋಟಿ, ನೈಡಲ್ ಕಂಪನಿಯಿಂದ ಸುಮಾರು 4000 ಜನರಿಗೆ ಉದ್ಯೋಗ, ಸುನಿಲ್ ಮಿತ್ತಲ್ ಅವರು ಮೆಗಾ ಡಾಟಾ ಸೆಂಟರ್, ರಿನ್ಯೂ ಕಂಪನಿ ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ 7 ವರ್ಷದಲ್ಲಿ 50 ಸಾವಿರ ಕೋಟಿ ಹೂಡಿಕೆ, ಅದಾನಿ ಗ್ರುಪ್ ರಿನಿವಲ್ ಎನರ್ಜಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದಾವೋಸ್ ನಲ್ಲಿ ಸುಮಾರು 25 ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಸುಮಾರು 65 ಸಾವಿರ ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದವಾಗಿದೆ. ಕರ್ನಾಟಕದ ಸ್ಕಿಲ್, ಮೂಲಸೌಕರ್ಯ, ಇಲ್ಲಿ ತಂತ್ರಜ್ಞಾನದ ಬಗ್ಗೆ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ನವೆಂಬರ್ 2 ರಿಂದ 4ರ ವರೆಗೆ ಬಡವಾಳ ಹೂಡಿಕೆದಾರರ ಸಮಾವೇಶ, ನವೆಂಬರ್ 16-17 ಟೆಕ್ ಸಮ್ಮಿಟ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ ಸಿಎಂ, ಕರ್ನಾಟಕದ ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆಯಾಗುವ ಸೂಚನೆ ಇದೆ. ಇನ್ನಷ್ಟು ಬದ್ದತೆಯಿಂದ ಕೆಲಸ ಮಾಡಿ ಎಂಡ್ ಟು ಎಂಡ್ ಕೆಲಸ ಮಾಡುತ್ತೇವೆ. ಭಾರತದಲ್ಲಿ ಕರ್ನಾಟಕಕ್ಕೆ ತನ್ನದೆ ಆದ ಮಹತ್ವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಬಾರದು.
ಲಕ್ಷ್ಮಿ ಮಿತ್ತಲ್ ಅವರಿಗೆ ರಾಜ್ಯದ ಪಾಲಿಸಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ಮಿತ್ತಲ್ ಅವರು ರಾಜ್ಯ ಸರ್ಕಾರದ ಸ್ಥಿರತೆ ಬಗ್ಗೆ ಸಾಮಾನ್ಯವಾಗಿ ಕೇಳಿದ್ದಾರೆ. ಅದನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ಬೆಂಗಳೂರು ಮೂಲ ಸೌಕರ್ಯ ನವೆಂಬರ್ ಹೊತ್ತಿಗೆ ಸರಿಪಡಿಸುತ್ತೇವೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist