ಥಳಪತಿ ವಿಜಯ್ ದಕ್ಷಿಣ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ? ಪತ್ನಿ ಸಂಗೀತಾ ಜೊತೆ ವಿಚ್ಛೇದನದ ವದಂತಿ..?
ಕಾಲಿವುಡ್ ಅಂಗಳದಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದ್ರೆ ದಳಪತಿವಿಜಯ್ ಮತ್ತು ಸಂಗೀತಾ ದಂಪತಿಯ ದಾಂಪತ್ಯದ ವಿಚಾರ. ಸಾಕಷ್ಟು ಸಮಯದಿಂದ ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡಲಿದ್ದಾರೆ ಎಂಬ ವದಂತಿಯ ನಡುವೆ ಹೊಸದೊಂದು ಸುದ್ದಿ ಈಗ ಸೌಂಡ್ ಮಾಡ್ತಿದೆ. ಡಿವೋರ್ಸ್ ನಂತರ ಖ್ಯಾತ ನಟಿಯನ್ನ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.
`ವಾರಿಸು’ ಸಕ್ಸಸ್ ಖುಷಿಯಲ್ಲಿರುವ ವಿಜಯ್ ಇದೀಗ ಮತ್ತೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ನಟ ವಿಜಯ್ ದಾಂಪತ್ಯದಲ್ಲಿ ಬಿರುಕಾಗಿದೆ. ಪತ್ನಿ ಸಂಗೀತಾ ಮತ್ತು ವಿಜಯ್ ನಡುವೆ ಹೊಂದಾಣಿಕೆ ಇಲ್ಲ. 22 ವರ್ಷಗಳ ಪ್ರೀತಿಗೆ ಬ್ರೇಕ್ ಬೀಳಲಿದೆ. ಈ ಜೋಡಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪತ್ನಿ ಸಂಗೀತಾಗೆ ಡಿವೋರ್ಸ್ ಕೊಟ್ಟ ಮೇಲೆ ನಟಿ ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.
`ಭೈರವ’ ಮತ್ತು `ಸರ್ಕಾರ್’ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಇದೀಗ ಪ್ರೀತಿಗೆ ತಿರುಗಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೇಲ್ಲಾ ಮದುವೆಯ ಬಗ್ಗೆ ಸುದ್ದಿಯಾಗುತ್ತಿದ್ದರು ಕೂಡ ನಟ ವಿಜಯ್ ದಂಪತಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.