ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಸಂಗ್ರಹ ಕನಿಷ್ಟ ಮಟ್ಟಕ್ಕೆ- ಮಂಗಳೂರಿಗೆ ನೀರಿನ ಕೊರತೆ
Twitter
Facebook
LinkedIn
WhatsApp
ಮಂಗಳೂರು, ಮೇ 19 : ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಅಣೆಕಟ್ಟಿಗೆ ನೀರಿನ ಒಳಹರಿವು ತೀವ್ರವಾಗಿ ಕುಸಿದಿದ್ದು , ಪೂರ್ವ ಮುಂಗಾರು ಮಳೆಯಾಗದಿದ್ದರೆ ನಗರವು ನೀರಿನ ತೀವ್ರ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ.
ಮಾರ್ಚ್-ಏಪ್ರಿಲ್‌ನಲ್ಲಿ ಪೂರ್ವ ಮಾನ್ಸೂನ್ ಮಳೆಯನ್ನು ಬಂದರೆ, ನಗರಕ್ಕೆ ನೀರಿನ ಬಿಕ್ಕಟ್ಟು ಕಂಡುಬರುವುದಿಲ್ಲ ಆದರೆ ಈಗಾಗಲೆ ಮಳೆ ಕೊರತೆಯಿಂದ ಮಂಗಳೂರು ಮಹಾನಗರ ಪಾಲಿಕೆ ನೀರಿನ ರೇಷನಿಂಗ್ ಆರಂಭಿಸಿದೆ. ತುಂಬೆ ವೆಂಟೆಡ್ ಡ್ಯಾಂ ನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಸದ್ಯ ೩.೪೧ಮೀ. ನೀರು ಸಂಗ್ರಹವಿದ್ದು ಇದು ಕಳೆದ ಐದು ವರ್ಷದಲ್ಲೇ ಕನಿಷ್ಟ ನೀರಿನ ಮಟ್ಟವಾಗಿದೆ.
ಈಗಾಗಲೇ ನಗರಕ್ಕೆ ದಿನ ಬಿಟ್ಟು ದಿನಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು ಶೀಘ್ರ ಉತ್ತಮ ಮಳೆಯಾಗದಿದ್ದರೆ ನಗರದಲ್ಲಿ ನೀರಿನ ಕೊರತೆ ಬಹುವಾಗಿ ಕಾಡುವ ಆತಂಕ ಎದುರಾಗಿದೆ.