ತಂದೆ ವಿರುದ್ಧವೇ ಠಾಣೆ ಮೆಟ್ಟಿಲೇರಿದ 9 ವರ್ಷದ ಬಾಲಕಿ!
ಹೈದರಾಬಾದ್: ಅಪ್ಪ (Father) ಕುಡಿದು ಬಂದು ಅಮ್ಮನನ್ನೂ (Mother), ನನ್ನನ್ನೂ ಪ್ರತಿದಿನವೂ ಹೊಡೆಯುತ್ತಾರೆ. ಪ್ರತಿದಿನ ಕುಡಿದು ಮನೆಗೆ ಬಂದು ಹೊಡೆಯುತ್ತಾರೆ ಎಂದು 4 ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ತಂದೆ ವಿರುದ್ಧವೇ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ ಆಶ್ಚರ್ಯಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ಪೊಲೀಸ್ ಠಾಣೆಗೆ ದಾವಿಸಿದ್ದು, ಕಣ್ಣೀರಿಡುತ್ತಾ ಪ್ರತಿದಿನ ತನ್ನ ತಂದೆ ನೀಡುತ್ತಿರುವ ಕಿರುಕುಳದ (Assult) ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
ಕಾಮರೆಡ್ಡಿ ಜಿಲ್ಲೆಯ ಬಿರ್ಕೂ ರಾಮಮಂಡಲ ಕೇಂದ್ರದ ಲತೀಫ್ ಮತ್ತು ಗೌಶ್ಯ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಅತ್ತೆಯ ಮನೆಗೆ ಕಳುಹಿಸಲಾಗಿದೆ. ಕಿರಿಯ ಮಗಳು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಕೂಲಿ ಕೆಲಸ ಮಾಡುವ ಲತೀಫ್ ಪ್ರತಿ ದಿನ ಕುಡಿದು ಬಂದು ತನ್ನ ಹೆಂಡತಿ ಮತ್ತು ಪುಟ್ಟ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಪರಿಣಾಮ ಫಾತಿಮಾ ಎಂಬ ಬಾಲಕಿ ತನ್ನ ತಂದೆ ಲತೀಫ್ ವಿರುದ್ಧ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.