ಡ್ರ್ಯಾಗರ್ ಹಿಡಿದು ನಡು ರಸ್ತೆಯಲ್ಲಿ ಯುವತಿಗೆ ಕಿರುಕುಳ!
Twitter
Facebook
LinkedIn
WhatsApp
ಬೆಂಗಳೂರು: ಹಾಡಹಗಲೇ ಡ್ರ್ಯಾಗರ್ ಹಿಡಿದುಕೊಂಡು ಪುಂಡ ಯುವಕನೊಬ್ಬ ನಡು ರಸ್ತೆಯಲ್ಲಿ ಯುವತಿಗೆ (Woman) ಕಿರುಕುಳ (Molest) ನೀಡಿರುವ ಆಘಾತಕಾರಿ ಘಟನೆ ಪುಲಿಕೇಶಿನಗರದಲ್ಲಿ (Pulikeshinagar) ನಡೆದಿದೆ.
ನಗರದ ವಿವೇಕಾನಂದ ರೆಸಿಡೆನ್ಸಿ ಬಳಿ ಯುವಕನೊಬ್ಬ ಡ್ರ್ಯಾಗರ್ ಹಿಡಿದುಕೊಂಡು ಯುವತಿಗೆ ಕಿರುಕುಳ ನೀಡಿದ್ದಾನೆ. ಯುವತಿಯನ್ನು ಬೆನ್ನಟ್ಟುತ್ತಾ ಬಂದ ಅಪರಿಚಿತ ಯುವಕ ಆಕೆಯ ಮೊಬೈಲ್ ಅನ್ನು ಕಸಿಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಮಹಿಳೆಯೊಬ್ಬರು ಇದನ್ನು ಗಮನಿಸಿ ಯುವತಿಯ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸರಿಯಾಗಿ ಹೊಯ್ಸಳ ಪೆಟ್ರೋಲಿಂಗ್ ಆಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.