![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವ ಮಾರ್ಚ್ 3 ರಿಂದ 7 ರವರೆಗೆ ಜರಗಲಿದ್ದು ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗೆಜ್ಜೆಗಿರಿ ಕ್ಷೇತ್ರ ಗೌರವಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ನೇತೃತ್ವದಲ್ಲಿ ಜರಗಿತು.
ಉಡುಪಿ ವಲಯದ ಆಮಂತ್ರಣ ಪತ್ರಿಕೆಯನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಬಿಡುಗಡೆ ಗೊಳಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದರು ರಾಜಶೇಖರ್ ಕೋಟ್ಯಾನ್ ರವರು ಬಿಲ್ಲವ ಸಮಾಜದ ಒಗ್ಗಟ್ಟು ಇಂದಿನ ಅಗತ್ಯ ಕೂಡ ಆಗಿದೆ ಈ ಬಗ್ಗೆ ಕಾರ್ಣಿಕ ಕ್ಷೇತ್ರ ವಾದ ಗೆಜ್ಜೆಗಿರಿಯ ಜಾತ್ರೋತ್ಸವದ ದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಮತೊಮ್ಮೆ ಇತಿಹಾಸ ನಿರ್ಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕರ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ಸುಧಾಕರ ಡಿ. ಅಮೀನ್ ಪಾಂಗಾಳ ಗುಡ್ಡೆಗರಡಿ, ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ ಕಟಪಾಡಿ, ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಗೌ. ಪ್ರ. ಕಾರ್ಯದರ್ಶಿ ಶಿವಾನಂದ ಪೂಜಾರಿ, ಕಟಪಾಡಿ ಏಣಗುಡ್ಡೆ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಗೆಜ್ಜೆಗಿರಿಯ ಕಾರ್ಯಕಾರಿ ಸದಸ್ಯರಾದ ಹರೀಶ್ ಅಮೀನ್ ಕಟಪಾಡಿ, ಗೆಜ್ಜೆಗಿರಿ ವಕ್ತಾರರಾದ ರಾಜೇಂದ್ರ ಚಿಲಿಂಬಿ, ಗೆಜ್ಜೆಗಿರಿ ಕ್ಷೇತ್ರದ ಕಾರ್ಯಕಾರಿ ಸದಸ್ಯರಾದ ಅಶೋಕ ಸುವರ್ಣ, ಸಮಾಜದ ಪ್ರಮುಖರಾದ ಶಂಕರ ಪೂಜಾರಿ ಕಟಪಾಡಿ, ಜಗನಾಥ್ ಕೋಟೆ ಸಂತೋಷ್ ಕುಮಾರ್ ಉದ್ಯಾವರ, ಸುಧೀರ್ ಪೂಜಾರಿ ಕಟಪಾಡಿ, ಮಹೇಶ್ ಪೂಜಾರಿ ಮೂಡಬೆಟ್ಟು ಸುದರ್ಶನ್ ಅಂಬಾಡಿ, ಅಶೋಕ್ ಕುಮಾರ್ ಕುತ್ಪಾಡಿ, ಸದಾಶಿವ ಪೂಜಾರಿ ಇನ್ನಂಜೆ, ವಾಮನ ಪೂಜಾರಿ ಕುರ್ಕಾಲು, ಭಾಸ್ಕರ ಪೂಜಾರಿ ಉದ್ಯಾವರ, ಸತೀಶ್ ಅಂಬಾರಿ, ಹರೀಶ್ ಮಟ್ಟು ರಾಕೇಶ್ ಕುಂಜೂರು, ಪ್ರತಾಪ್ ಕುಮಾರ್ ಮುಂತಾದ ಪ್ರಮುಖರು ಉಪಸ್ಥರಿದ್ದರು.
ಗೆಜ್ಜೆಗಿರಿ ಕಾರ್ಯಕಾರಿ ಸದಸ್ಯರಾದ ನವೀನ್ ಅಮೀನ್ ಶಂಕರಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist