ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ಸಾನ್ವಿ, ಫೋಟೋ ವೈರಲ್!
Twitter
Facebook
LinkedIn
WhatsApp
ಕಿಚ್ಚ ಸುದೀಪ್ (Saanvi Sudeep) ಅವರ ಏಕೈಕ ಮುದ್ದಿನ ಮಗಳು ಸಾನ್ವಿ, ʻಜಿಮ್ಮಿʼ ಸಿನಿಮಾ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಸಿನಿಮಾದ ಹಾಡಿನ ಮೂಲಕ ಸಾನ್ವಿ ಅವರಿಗೂ ಸಾಕಷ್ಟು ಮಂದಿ ಫ್ಯಾನ್ಸ್ ಇದ್ದಾರೆ. ಇದೀಗ ಸಾನ್ವಿ ಕತ್ತಿನ ಭಾಗದಲ್ಲಿ ‘ಪೀಕು’ (PIKU) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ʻಪೀಕುʼ, ಸಾನ್ವಿಯ ತಾಯಿ ಪ್ರಿಯಾ ಸುದೀಪ್ರ ಅಡ್ಡ ಹೆಸರು. ಪ್ರಿಯಾ ಸುದೀಪ್ ಅವರನ್ನು ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ. ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಸಾನ್ವಿ.
ಸಾನ್ವಿ ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಸುದೀಪ್ ಅವರ ಸೋದರಳಿಯನ ‘ಜಿಮ್ಮಿ’ ಸಿನಿಮಾಕ್ಕೆ ಸಾನ್ವಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.