ಟೈರ್ ಸ್ಫೋಟ, ಪಲ್ಟಿಯಾದ ಕಾರು ಬಿಜೆಪಿ ನಾಯಕಿ ನೀರಜಾ ರೆಡ್ಡಿ ನಿಧನ
Twitter
Facebook
LinkedIn
WhatsApp
ತೆಲಂಗಾಣದ ಬೀಚುಪಲ್ಲಿಯಲ್ಲಿ ನಡೆದ ಅಪಘಾತದಲ್ಲಿ ಬಿಜೆಪಿ ನಾಯಕಿ ನೀರಜಾ ರೆಡ್ಡಿ( Neeraja Reddy) ಕೊನೆಯುಸಿರೆಳೆದಿದ್ದಾರೆ. ಕರ್ನೂಲ್ನ ಆಲೂರು ಬಿಜೆಪಿ ಉಸ್ತುವಾರಿ ಹಾಗೂ ಮಾಜಿ ಶಾಸಕಿ ನೀರಜಾ ರೆಡ್ಡಿ ಅವರು ಹೈದರಾಬಾದ್ನಿಂದ ಕರ್ನೂಲ್ಗೆ ಹಿಂತಿರುಗುತ್ತಿದ್ದಾಗ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ಬೀಚುಪಲ್ಲಿ ಎಂಬಲ್ಲಿ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿತ್ತು.
ಕೋದಂಡಪುರಂ ಪೊಲೀಸರ ಪ್ರಕಾರ, 52 ವರ್ಷದ ನೀರಜಾ ತೆಲಂಗಾಣಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಕಾರಿನ ಟೈರ್ ಸ್ಫೋಟಗೊಂಡು ವಾಹನದ ಮೇಲೆ ಚಾಲಕನ ನಿಯಂತ್ರಣ ತಪ್ಪಿದೆ. ನೀರಜಾರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಆಲೂರು ಕ್ಷೇತ್ರದ ಮಾಜಿ ಶಾಸಕಿ ನೀರಜಾ ರೆಡ್ಡಿ ಅವರು 2009 ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದರು, ಆದರೆ ನಂತರ 2019 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ (ವೈಎಸ್ಆರ್ಸಿಪಿ) ಸೇರಿದರು.