ಭಾನುವಾರ, ಏಪ್ರಿಲ್ 28, 2024
ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜೆಡಿಎಸ್ ಭದ್ರಕೋಟೆ ಒಡೆಯಲು ಸುಮಲತಾ ರಣತಂತ್ರ

Twitter
Facebook
LinkedIn
WhatsApp
Rain Report1583178931 7

ಮಂಡ್ಯ: ಕಳೆದ ಲೋಕಸಭಾ ಚುನಾವಣೆ ವೇಳೆಯಿಂದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾಗೂ ಜೆಡಿಎಸ್ (JDS) ನಾಯಕರ ನಡುವಿನ ಸಮರ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಮಂಡ್ಯದಲ್ಲಿ (Mandya) ದಳಪತಿಗಳ ಕೋಟೆಯನ್ನು ಛಿದ್ರ ಮಾಡಿ ಬಿಜೆಪಿ ಸಾರ್ವಭೌಮತ್ವ ಸ್ಥಾಪಿಸಬೇಕೆಂದು ರೆಬಲ್ ಲೇಡಿ ಪಣತೊಟ್ಟಂತೆ ಕಾಣುತ್ತಿದ್ದು, ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಧುಮುಕಿ ಜೆಡಿಎಸ್ ವಿರುದ್ಧ ರಣಕಹಳೆ ಊದಿದ್ದಾರೆ.

Cauvery water: Sumalatha counters Maran | Deccan Herald

ಸಂಸದೆ ಸುಮಲತಾ ಅಂಬರೀಶ್ ರಾಷ್ಟ್ರ ರಾಜಕೀಯಕ್ಕೆ ಗುಡ್ ಬಾಯ್ ಹೇಳಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಗ್ರ‍್ಯಾಂಡ್ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದ್ದವು. ಈ ಮಾತುಗಳಿಗೆ ಸುಮಲತಾ ಅಂಬರೀಶ್ ಕಡ್ಡಿ ತುಂಡರಿಸಿದ ಹಾಗೆ ನಾನು ರಾಜ್ಯ ರಾಜಕೀಯಕ್ಕೆ ಬರಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂದರ್ಭಕ್ಕೆ ತಕ್ಕ ಹಾಗೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಮಾತಿನ ಹಿಂದೆ ರೆಬೆಲ್ ಲೇಡಿ ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಸಾರ್ವಭೌಮತ್ವ ಸ್ಥಾಪನೆ ಮಾಡುವ ಲೆಕ್ಕಾಚಾರವಿದೆ. ಇದೇ ತಿಂಗಳ 17ರಂದು ಬಿಜೆಪಿ (BJP) ಪಕ್ಷಕ್ಕೆ ಬೆಂಬಲ ಸೂಚಿಸಿದ ಸುಮಲತಾ ಅಂಬರೀಶ್ ಅಂದಿನಿಂದ ಮಂಡ್ಯ ಜಿಲ್ಲೆಯ ಚುನಾವಣೆಯ ಅಖಾಡದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. 

മോദിയിലും ബിജെപിയിലും വിശ്വസിക്കുന്നു'; തിരഞ്ഞെടുപ്പിന് മുമ്പേ ബിജെപിക്ക്  പിന്തുണയുമായി സുമലത, Sumalatha Ambareesh announces support for BJP,  Narendra Modi, India ...

ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚನೆ ನೀಡಿದ ದಿನದಿಂದ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿಯ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳನ್ನು ಭೇಟಿ ಮಾಡಿ ಚುನಾವಣೆಯ (Election) ರಣತಂತ್ರದ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ.

Mandya Congress leader expelled for backing Sumalatha Ambareesh

ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೂಲಕ ಮೊದಲ ಬಾರಿಗೆ ಜೆಡಿಎಸ್ ಭದ್ರಕೋಟೆ ಒಡೆದಿದೆ. ಇದಾದ ಬಳಿಕ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳುವ ಮೂಲಕ ಮತ್ತೊಮ್ಮೆ ಜೆಡಿಎಸ್‌ಗೆ ಪೆಟ್ಟು ನೀಡಲಾಗಿದೆ. ಇದೀಗ ಮಗದೊಮ್ಮೆ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಸದಾವಕಾಶ ಒದಗಿ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದು ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಬೇಕು. ಇದು ತಾಲೂಕಾದ ಮದ್ದೂರಿನಿಂದಲೇ (Maddur) ಪ್ರಾರಂಭವಾಗಲಿ. ಇದು ನಿಮ್ಮಿಂದ ಸಾಧ್ಯ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ತಮ್ಮ ಅಭಿಮಾನಿಗಳಿಗೆ ಹೇಳುವ ಮೂಲಕ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಿಚ್ಚನ್ನು ಹಚ್ಚಿದ್ದಾರೆ. 

We were the Lagaan team... our win was like hitting a last-ball six:  Sumalatha | Mint

ಒಟ್ಟಾರೆ ದಳಪತಿಗಳ ಮೇಲೆ ರೆಬೆಲ್ ಲೇಡಿಗಿರುವ ಕಿಡಿ ಸ್ವಲ್ಪವೂ ಆರಿದಂತೆ ಕಾಣುತ್ತಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ಗೆ ಎಷ್ಟರ ಮಟ್ಟಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಚುನಾವಣೆಯ ಫಲಿತಾಂಶದ ಬಳಿಕ ನೋಡಬೇಕಿದೆ.

Where is Sumalatha? In Covid time, people of K R Nagar wait for their MP :  Welcome to Mysooru News

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ