ಜಮ್ಮು ಮತ್ತು ಕಾಶ್ಮೀರದಲ್ಲಿ ಅವಳಿ ಸ್ಫೋಟ ;ಕನಿಷ್ಠ 7 ಜನರಿಗೆ ಗಾಯ
Twitter
Facebook
LinkedIn
WhatsApp
ಶ್ರೀನಗರ : ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಅವಳಿ ಸ್ಫೋಟ ಸಂಭವಿಸಿದ್ದು, ಕನಿಷ್ಠ7 ಜನರು ಗಾಯಗೊಂಡಿದ್ದಾರೆ.ಸ್ಫೋಟಗಳು ಸಂಭವಿಸಿದ ಬಳಿಕ ಸ್ಥಳಕ್ಕೆ ಭದ್ರತಾ ಪಡೆಗಳು, ಉನ್ನತ ಅಧಿಕಾರಿಗಳು ದೌಡಾಯಿಸಿದ್ದು, ನರ್ವಾಲ್ ಪ್ರದೇಶದಲ್ಲಿ ಶ್ವಾನದಳ ತನಿಖೆ ನಡೆಸುತ್ತಿದೆ.ಸೇನೆ ಪ್ರದೇಶವನ್ನು ಸುತ್ತುವರಿದಿದೆ.
30 ನಿಮಿಷಗಳಲ್ಲಿ ಎರಡು ತೀವ್ರತೆಯ ಸ್ಫೋಟಗಳು ಸಂಭವಿಸಿವೆ ಎಂದು ಇಂಟೆಲ್ ಮೂಲಗಳು ತಿಳಿಸಿವೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದ ಮೊದಲ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಸಂಭವಿಸಿದ ಎರಡನೇ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡವರನ್ನು ಸುಹೇಲ್ ಇಕ್ಬಾಲ್ (35), ಸುಶೀಲ್ ಕುಮಾರ್ (26), ವಿಶ್ವ ಪ್ರತಾಪ್ (25), ವಿನೋದ್ ಕುಮಾರ್ (52), ಅರುಣ್ ಕುಮಾರ್, ಅಮಿತ್ ಕುಮಾರ್ (40) ಮತ್ತು ರಾಜೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ.