ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಿರುವ ಖ್ಯಾತ ನಿರ್ದೇಶಕ ರಾಜಮೌಳಿ

Twitter
Facebook
LinkedIn
WhatsApp
ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಿರುವ ಖ್ಯಾತ ನಿರ್ದೇಶಕ ರಾಜಮೌಳಿ

ರಾಜ್ಯದಲ್ಲಿ ರಾಜಕೀಯ (Politics) ಕಾವು ಜೋರಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆರೆಮರೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಜಾಗೃತಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ರಾಯಭಾರಿ ನೇಮಕ ಮಾಡಲಾಗಿದೆ. ಅದರಂತೆಯೇ ರಾಯಚೂರು (Raichur) ಜಿಲ್ಲೆಗೆ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರನ್ನು ಚುನಾವಣಾ (Election) ರಾಯಭಾರಿಯಾಗಿ (Ambassador) ನೇಮಕ ಮಾಡಿದೆ

ರಾಜಮೌಳಿ ಅವರು ತನ್ನ ಹುಟ್ಟೂರಿಗೆ ಚುನಾವಣಾ ರಾಯಭಾರಿಯಾಗಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ನೇಮಕ ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಪೈಕಿ ರಾಜಮೌಳಿ ಹೆಸರು ಸಾಕಷ್ಟು ಗಮನ ಸೆಳೆದಿದೆ. ಎಸ್.ಎಸ್ ರಾಜಮೌಳಿ ಅವರನ್ನ ನೇಮಕ ಮಾಡಿರುವ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿದೆ. ಇದರ ಜೊತೆಗೆ ರಾಜಮೌಳಿಗೆ ರಾಯಚೂರು ಜಿಲ್ಲೆಯ ಕನೆಕ್ಷನ್ ಕೂಡ ಇದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಆಂಧ್ರದಲ್ಲಿ ಜಮೀನು ಹೊಂದಿದ್ದರು. ಆದರೆ, ರೈಲ್ವೇ ಟ್ರ‍್ಯಾಕ್ ನಿರ್ಮಾಣದಿಂದ ಜಮೀನನ್ನು ಕಳೆದುಕೊಂಡರು. ಈ ವೇಳೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು 1968ರಲ್ಲಿ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ 7 ಎಕರೆ ಭತ್ತದ ಜಮೀನು ಪಡೆದು ಅಲ್ಲಿಯೇ ಕೃಷಿ ಮಾಡಿದರು. ರಾಜಮೌಳಿ ಹುಟ್ಟಿದ್ದು 1973ರಲ್ಲಿ. 1977ರಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕುಟುಂಬ ಸಮೇತ ಮತ್ತೆ ಆಂಧ್ರ ಪ್ರದೇಶಕ್ಕೆ ತೆರಳಿದರು. ಹೀಗಾಗಿ, ರಾಜಮೌಳಿಗೆ ರಾಯಚೂರು ಜಿಲ್ಲೆಯ ಬಗ್ಗೆ ವಿಶೇಷ ಗೌರವ ಇದೆ.

ಪ್ರತಿಯೊಬ್ಬರೂ ಮತನದಾನ ಮಾಡಬೇಕು ಎಂದು ಸರ್ಕಾರ ಜಾಗೃತಿ ಮೂಡಿಸುತ್ತದೆ. ಆಯಾ ಜಿಲ್ಲೆಯ ರಾಯಭಾರಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಇದಕ್ಕಾಗಿ ಏರ್ಪಡಿಸುವ ವಿವಿಧ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಭಾಗಿಯಾಗಲಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ