ಗುರುವಾರ, ಮೇ 16, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗ್ಯಾಂಗ್‌ಸ್ಟರ್ ಮೇಲೆ ದಾಳಿ: ಮಗಳನ್ನು ಕೋಚಿಂಗ್‌ಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಸಾವು

Twitter
Facebook
LinkedIn
WhatsApp
ಗ್ಯಾಂಗ್‌ಸ್ಟರ್ ಮೇಲೆ ದಾಳಿ: ಮಗಳನ್ನು ಕೋಚಿಂಗ್‌ಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಸಾವು

ಜೈಪುರ: ರಾಜಸ್ಥಾನದಲ್ಲಿ ಶನಿವಾರ ನಡೆದ ಗ್ಯಾಂಗ್‌ವಾರ್‌ನಲ್ಲಿ ಒಬ್ಬ ನಟೋರಿಯಸ್ ಗ್ಯಾಂಗ್‌ಸ್ಟರ್‌ ಸೇರಿದಂತೆ ಗುಂಡೇಟಿಗೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕಾರ್ ನಗರದ ಪಿಪ್ರಾಲಿ ರಸ್ತೆಯಲ್ಲಿನ ಗ್ಯಾಂಗ್‌ಸ್ಟರ್ ರಾಜು ತೇಥ್‌ನ ನಿವಾಸದ ಪ್ರವೇಶ ಭಾಗದಲ್ಲಿ ನಾಲ್ವರ ಗುಂಪು ಆತನ ಮೇಲೆ ಗುಂಡಿನ ದಾಳಿ ನಡೆಸಿದೆ. ಶನಿವಾರ ಬೆಳಿಗ್ಗೆ 9.30ರ ವೇಳೆಗೆ ಈ ಘಟನೆ ನಡೆದಿದೆ. ದಾಳಿ ನಡೆಸಿದ ಹಂತಕರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ರಾಜ್ಯವ್ಯಾಪಿ ಹುಡುಕಾಟ ನಡೆಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಹೇಳಿದ್ದಾರೆ.

ಆದರೆ ಈ ದಾಳಿಯಲ್ಲಿ ಅಮಾಯಕರೊಬ್ಬರು ಬಲಿಯಾಗಿದ್ದಾರೆ. ಕೋಚಿಂಗ್ ಸೆಂಟರ್ ಒಂದಕ್ಕೆ ತಮ್ಮ ಮಗಳನ್ನು ದಾಖಲಾತಿ ಮಾಡಲು ಈ ಪ್ರದೇಶಕ್ಕೆ ತೆರಳಿದ್ದ ತಾರಾಚಂದ್ ಕಡ್ವಸರಾ ಎಂಬುವವರು ಕೂಡ ಗುಂಡು ತಗುಲಿ ಮೃತಪಟ್ಟಿದ್ದಾರೆ. ಅವರ ಸಂಬಂಧಿ ಸಹ ಗುಂಡೇಟಿಗೆ ಗಾಯಗೊಂಡಿದ್ದಾರೆ.

ಅನೇಕ ಹಾಸ್ಟೆಲ್‌ಗಳು ಮತ್ತು ಕೋಚಿಂಗ್ ಕೇಂದ್ರಗಳು ಇರುವ ಸ್ಥಳದಲ್ಲಿ ಈ ದುಷ್ಕೃತ್ಯ ನಡೆದಿದೆ. ಗ್ಯಾಂಗ್‌ಸ್ಟರ್ ತೇಥ್‌ನ ಸಹೋದರ ಕೂಡ ಇಲ್ಲಿ ಒಂದು ಹಾಸ್ಟೆಲ್ ನಡೆಸುತ್ತಿದ್ದಾನೆ ಎನ್ನಲಾಗಿದೆ.

ತೇಥ್‌ನ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿದ್ದರಿಂದ ತೀವ್ರ ಗಾಯಗೊಂಡು ಆತ ಕೊನೆಯುಸಿರೆಳೆದಿದ್ದಾನೆ. ಆತನಿಗೆ ರಾಜ್ಯದ ಶೆಖಾವತಿ ಪ್ರದೇಶದಲ್ಲಿನ ಮತ್ತೊಂದು ಗ್ಯಾಂಗ್ ಜತೆ ವೈರತ್ವವಿತ್ತು.

ಸಿಸಿಟವಿ ಕ್ಯಾಮೆರಾದಲ್ಲಿ ಹಲವು ವಿಡಿಯೋಗಳು ದಾಖಲಾಗಿದ್ದು, ಬೀದಿಯಲ್ಲಿ ನಾಲ್ವರು ಆರೋಪಿಗಳು ತೇಥ್ ಮೇಲೆ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗುವುದು ಕಾಣಿಸಿದೆ. ದಾರಿಹೋಕರು ಮತ್ತು ಪ್ರತ್ಯಕ್ಷದರ್ಶಿಗಳನ್ನು ಬೆದರಿಸಲು ಅವರಲ್ಲಿ ಒಬ್ಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಹತ್ಯೆ ನಡೆದ ಕೆಲವೇ ಸಮಯದಲ್ಲಿ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡ ರೋಹಿತ್ ಗೊಡಾರಾ ಎಂಬಾತ ಫೇಸ್‌ಬುಕ್‌ನಲ್ಲಿ ಇದಕ್ಕೆ ತಾನೇ ಹೊಣೆಗಾರ ಎಂದು ಹೇಳಿಕೊಂಡಿದ್ದಾನೆ. ಆನಂದ್‌ಪಾಲ್ ಸಿಂಗ್ ಮತ್ತು ಬಲ್ಬೀರ್ ಬನೂಡಾ ಅವರ ಹತ್ಯೆಗೆ ತೇಥ್ ಕೊಲೆ ಪ್ರತೀಕಾರವಾಗಿದೆ ಎಂದು ಆತ ಹೇಳಿದ್ದಾನೆ.

ಬಲ್ಬೀರ್ ಬನೂಡಾ, ಆನಂದ್‌ಪಾಲ್ ಸಿಂಗ್ ಗ್ಯಾಂಗ್‌ನ ಸದಸ್ಯನಾಗಿದ್ದು, 2014ರ ಜುಲೈನಲ್ಲಿ ಬಿಕಾನೇರ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಹತ್ಯೆಯಾಗಿದ್ದ. ತೇಥ್‌ನ ಬೆಂಬಲಿಗರು ಸಿಕಾರ್‌ನಲ್ಲಿ ಬಂದ್‌ಗೆ ಕರೆ ನೀಡಿದ್ದು, ಹಂತಕರನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ