ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್ ಗಳನ್ನು ಪಡೆದು ವಿಶೇಷ ದಾಖಲೆ ಬರೆದ ವೇಗಿ ಭುವನೇಶ್ವರ್ ಕುಮಾರ್!
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ 5 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ 2023ರ ಐಪಿಎಲ್ ಟೂರ್ನಿಯಲ್ಲಿ 5 ವಿಕೆಟ್ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ವಿಶೇಷ ದಾಖಲೆ ಬರೆದರು.
ಈ ಪಂದ್ಯದಲ್ಲಿ ಒಟ್ಟು 4 ಓವರ್ ಬೌಲ್ ಮಾಡಿದ್ದ ಭುವನೇಶ್ವರ್ ಕುಮಾರ್ 30 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು. ಲಖನೌ ಸೂಪರ್ ಜಯಂಟ್ಸ್ ವೇಗಿ ಮಾರ್ಕ್ವುಡ್ ಬಳಿಕ 5 ವಿಕೆಟ್ ಕಿತ್ತ ಭುವನೇಶ್ವರ್ ಕುಮಾರ್ ಎರಡನೇ ಬೌಲರ್ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡದ ಮೊಟ್ಟ ಮೊದಲ ಪಂದ್ಯದಲ್ಲಿ ಮಾರ್ಕ್ವುಡ್ 14 ರನ್ ನೀಡಿ 5 ವಿಕೆಟ್ ಕಿತ್ತಿದ್ದರು. ಐಪಿಎಲ್ ಇತಿಹಾಸದಲ್ಲಿ ಭುವನೇಶ್ವರ್ ಕುಮಾರ್ ಅವರದು ಎರಡನೇ 5 ವಿಕೆಟ್ ಸಾಧನೆ ಇದಾಯಿತು.
ರಶೀದ್ ಖಾನ್ ಬಳಿಕ 2023ರ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯಬಹುದಾದ ಅವಕಾಶ ಭುವನೇಶ್ವರ್ ಕುಮಾರ್ ಅವರಿಗೆ ಇತ್ತು. ಆದರೆ, ಕೊನೆಯ ಓವರ್ನ ಮೂರನೇ ಎಸೆತದಲ್ಲಿ ನೂರ್ ಅಹ್ಮದ್ ರನ್ಔಟ್ ಆಗಿದ್ದರು. ಇದರಿಂದಾಗಿ ಶುಭಮನ್ ಗಿಲ್ ಹಾಗೂ ರಶೀದ್ ಖಾನ್ ಅವರನ್ನು ಔಟ್ ಮಾಡಿದ್ದ ಭುವನೇಶ್ವರ್ ಕುಮಾರ್ಗೆ ಹ್ಯಾಟ್ರಿಕ್ ಅವಕಾಶ ತಪ್ಪಿದ್ದಕ್ಕೆ ತುಂಬಾ ಬೇಸರವಾಯಿತು.ಅಂದಹಾಗೆ ಪಂದ್ಯದ ಮೊದಲನೇ ಓವರ್ನಲ್ಲಿಯೇ ಭುವನೇಶ್ವರ್ ಕುಮಾರ್ ಅವರು ಗುಜರಾತ್ ಟೈಟನ್ಸ್ ತಂಡದ ಆರಂಭಿಕ ವೃದ್ದಿಮಾನ್ ಸಹಾ ಅವರ ವಿಕೆಟ್ ಅನ್ನು ಉರುಳಿಸಿದ್ದರು. ನಂತರ ಜಿಟಿ ನಾಯಕ ಹಾರ್ದಿಕ್ ಪಾಂಡ್ಯ (8) ಅವರನ್ನು 16ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಔಟ್ ಮಾಡಿದ್ದರು. ಇನ್ನು ಪಂದ್ಯದ ಕೊನೆಯ ಓವರ್ನಲ್ಲಿ ಶುಭಮನ್ ಗಿಲ್, ರಶೀದ್ ಖಾನ್ ಹಾಗೂ ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದ್ದರು.ಭುವನೇಶ್ವರ್ ಕುಮಾರ್ 30ಕ್ಕೆ 4 ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಬೌಲ್ ಮಾಡಿದ ಮೂರನೇ ಅತ್ಯುತ್ತಮ ಸ್ಪೆಲ್ ಇದಾಯಿತು. ಇದಕ್ಕೂ ಮುನ್ನ ಇವರು 2017ರಲ್ಲಿ 19 ರನ್ಗೆ 5 ವಿಕೆಟ್ ಕಿತ್ತಿದ್ದರು ಹಾಗೂ 2022ರ ಟೂರ್ನಿಯಲ್ಲಿ ಉಮ್ರಾನ್ ಮಲಿಕ್ 25 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದ್ದರು.