ಭಾನುವಾರ, ಮೇ 19, 2024
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

Twitter
Facebook
LinkedIn
WhatsApp
Best 1

ಕೋಲ್ಕತ್ತಾ: ಕೋವಿಡ್‌ 19 (Covid 19) ನಂತರ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ದರ (Electrinics Product Price) ಮೊದಲ ಬಾರಿಗೆ ಭಾರೀ ಇಳಿಕೆಯಾಗುತ್ತಿದೆ.

2020ರ ಬಳಿಕ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಶೇ.5-15 ರಷ್ಟು ಇಳಿಕೆಯಾಗಿದೆ. ಖ್ಯಾತ ಕಂಪನಿಗಳಾದ ಎಲ್‌ಜಿ, ಸ್ಯಾಮ್‌ಸಂಗ್‌ ಸೇರದಿಂತೆ ಇನ್ನಿತರ ಕಂಪನಿಗಳ ಎಂಟ್ರಿ ಲೆವೆಲ್‌ ಫ್ರಿಡ್ಜ್‌ ಬೆಲೆ 4 ಸಾವಿರ ರೂ. ಇಳಿಕೆಯಾಗಿದೆ. 1 ಲಕ್ಷ ರೂ. ಬೆಲೆ ಇರುವ ಫ್ರಿಡ್ಜ್‌ ದರ 7 ಸಾವಿರದಿಂದ 15 ಸಾವಿರ ರೂ.ವರೆಗೆ ಇಳಿಕೆಯಾಗಿದೆ.

ಸ್ಮಾರ್ಟ್‌ಫೋನ್‌ ಬೆಲೆಗಳು ಶೇ.15ರಷ್ಟು ಇಳಿಕೆಯಾಗಿದೆ. 2020, 2021ರ ಅವಧಿಯಲ್ಲಿ ಫೋನ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಫೋನ್‌ ಉತ್ಪಾದನೆಯಾಗಿತ್ತು. ಈಗ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದಾಸ್ತಾನಿನಲ್ಲಿರುವ ಫೋನ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಂಪನಿಗಳು ದರವನ್ನು ಇಳಿಕೆ (Price Cut) ಮಾಡಿವೆ.

ಪ್ರತಿ ವರ್ಷ ಎಲೆಕ್ಟ್ರಾನಿಕ್ ಕಂಪನಿಗಳು ದರವನ್ನು ಏರಿಕೆ ಮಾಡುವುದು ಸಾಮಾನ್ಯ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಪ್ರತಿ ಬಾರಿ ಸುಮಾರು ಶೇ.2-4 ರಷ್ಟು ಬೆಲೆಗಳನ್ನು ವರ್ಷಕ್ಕೆ ಎರಡು-ಮೂರು ಬಾರಿ ಹೆಚ್ಚಿಸುತ್ತಿವೆ. ಉದ್ಯಮದ ಮಾಹಿತಿಯ ಪ್ರಕಾರ ಈ ವರ್ಷದ ಜನವರಿಯ ಹೊತ್ತಿಗೆ, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಫೆಬ್ರವರಿ 2020ರ ಪೂರ್ವ ಕೋವಿಡ್ ಅವಧಿಗಿಂತ ಸರಾಸರಿ ಶೇ.18-25 ರಷ್ಟು ಹೆಚ್ಚಾಗಿತ್ತು.

 

ಈಗ ಕಚ್ಚಾವಸ್ತುಗಳ ಬೆಲೆ ಕಡಿಮೆಯಾಗಿದೆ. ಕಳೆದ ವಷಕ್ಕೆ ಹೋಲಿಸಿದರೆ ಫೆಬ್ರವರಿಯಲ್ಲಿ ಅಲ್ಯೂಮಿನಿಯಂ ಬೆಲೆ ಶೇ. 16.3, ಉಕ್ಕು ಶೇ.1.3 ಮತ್ತು ಹೈ-ಡೆನ್ಸಿಟಿ ಪಾಲಿಥಿಲೀನ್ (HDPE) ಬೆಲೆ ಶೇ.7 ರಷ್ಟು ಕಡಿಮೆಯಾಗಿದೆ. ಜುಲೈನಿಂದ ಡಿಸೆಂಬರ್ 2022 ರವರೆಗೆ ಹಣದುಬ್ಬರದಿಂದ ತಾಮ್ರದ ಬೆಲೆಗಳು ಸ್ವಲ್ಪ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷದಿಂದ ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್ ಬೆಲೆ ಇಳಿಕೆಯಾಗುತ್ತಿದೆ. ಕೋವಿಡ್‌ ಸಮಯದಲ್ಲಿ ಉತ್ತುಂಗದಲ್ಲಿ ಇದ್ದ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಇಳಿಕೆಯಾಗಿದೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ