ಕೋಟ: ಬೇಕಾಬಿಟ್ಟಿ ಬೈಕ್ ಚಲಾಯಿಸಿ ಪೊಲೀಸರಿಗೆ ಢಿಕ್ಕಿಗೆ ಯತ್ನ

ಕುಂದಾಪುರ, ಮೇ 26: ನಾಲ್ಕು ಜನರನ್ನು ಒಂದೇ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೆದ್ದಾರಿಯಲ್ಲಿ ಪೊಲೀಸರೆದುರೇ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪರಾರಿಯಾದ ವ್ಯಕ್ತಿಯ ವಿರುದ್ಧ ಪೊಲೀಸರು ಸೊಮೊಟೋ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಗಣೇಶ ಗ್ರ್ಯಾಂಡ್ ಹೋಟೆಲ್ ಬಳಿ ನಡೆದಿದೆ.
ಬುಧವಾರ ಕೋಟ ಪೊಲೀಸರು ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಗಣೇಶ ಗ್ರ್ಯಾಂಡ್ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಹೆಲ್ಮೆಟ್ ಧರಿಸದೇ ಹಿಂಬದಿಯಲ್ಲಿ ಮೂವರನ್ನು ಕುಳ್ಳಿರಿಸಿಕೊಂಡು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕಂಡು ಬೈಕ್ ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸವಾರ ವೇಗ ಹೆಚ್ಚಿಸಿಕೊಂಡು ಬೇಕಾಬಿಟ್ಟಿಯಾಗಿ ಬೈಕ್ ಚಲಾಯಿಸಿದ್ದಾನೆ.
ಪೊಲೀಸರು ಇದರಿಂಡ ಕೂದಲೆಳೆಯಲ್ಲಿ ಪಾರಾಗಿದ್ದು, ಕರ್ತವ್ಯದಲ್ಲಿದ್ದವರ ದೈಹಿಕ ಸುರಕ್ಷತೆಗೆ ಧಕ್ಕೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಪರಾರಿಯಾಗಿರುವುದಾಗಿ ಕೋಟ ಎಸೈ ನರೇಂದ್ರ ದೂರು ದಾಖಲಿಸಿದ್ದಾರೆ.