ಗುರುವಾರ, ಮೇ 9, 2024
SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?-ಐಪಿಎಲ್ ನಲ್ಲಿ ಮಿಂಚುತ್ತಿದೆ ಹೆಡ್ ಮತ್ತು ಅಭಿಷೇಕ್ ಜೋಡಿ ; 58 ಎಸೆತಗಳಲ್ಲಿ 167 ರನ್ ಸಿಡಿಸಿ ಜಯಗಳಿಸಿದರ ಹೈದರಾಬಾದ್.!-ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ರಿಂಕು ಸಿಂಗ್!

Twitter
Facebook
LinkedIn
WhatsApp
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ರಿಂಕು ಸಿಂಗ್!

IPL 2023: ಕೊನೆಯ ಓವರ್​ನಲ್ಲಿ 29 ರನ್​ಗಳ ಗುರಿ…ಸ್ಟ್ರೈಕ್​ನಲ್ಲಿ ಉಮೇಶ್ ಯಾದವ್…ಗೆಲುವಿನ ವಿಶ್ವಾಸದಲ್ಲಿ ಗುಜರಾತ್ ಟೈಟಾನ್ಸ್…ಸೋಲುವ ಭೀತಿಯಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್…ಯಶ್ ದಯಾಳ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಉಮೇಶ್ ಯಾದವ್ 1 ರನ್​ ತೆಗೆದರು….ಆ ಬಳಿಕ ನಡೆದಿದ್ದು ಈಗ ಇತಿಹಾಸ.

ಐಪಿಎಲ್​ ಇತಿಹಾಸದಲ್ಲೇ ಹಿಂದೆಂದೂ ಕಂಡಿಯರದ ಚೇಸಿಂಗ್​ಗೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಿತ್ತು. ಕೊನೆಯ 5 ಎಸೆತಗಳಲ್ಲಿ 28 ರನ್​ಗಳ ಗುರಿಯನ್ನು ರಿಂಕು ಸಿಂಗ್ ನಿರಾಯಾಸವಾಗಿ ಚಚ್ಚಿ ಬಿಸಾಕಿದ್ದರು. ಇದು ಈಗ ಐತಿಹಾಸಿಕ ದಾಖಲೆ ಎಂಬುದು ವಿಶೇಷ.

ಯಶ್ ದಯಾಳ್ ಎಸೆದ ಕೊನೆಯ ಓವರ್​ನ 5 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲಿ ಕೊನೆಯ ಓವರ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ಪಂದ್ಯ ಗೆದ್ದ ದಾಖಲೆ ಕೊಲ್ಕತ್ತಾ ನೈಟ್​ ರೈಡರ್ಸ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ರೈಸಿಂಗ್ ಪುಣೆ ಜೈಂಟ್ಸ್ ಹೆಸರಿನಲ್ಲಿತ್ತು. 2016 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಓವರ್​ನಲ್ಲಿ 23 ರನ್​ಗಳನ್ನು ಬಾರಿಸಿ ಗೆದ್ದುಕೊಂಡಿದ್ದು ದಾಖಲೆಯಾಗಿತ್ತು.

ಇದೀಗ ರಿಂಕು ಸಿಂಗ್ ಕೊನೆಯ ಓವರ್​ನ 5 ಎಸೆತಗಳಲ್ಲಿ 30 ರನ್​ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಕೊನೆಯ ಓವರ್​ನಲ್ಲಿ 31 ರನ್​ ಕಲೆಹಾಕುವ ಮೂಲಕ ಅಂತಿಮ ಓವರ್​ನಲ್ಲಿ ಅತೀ ಹೆಚ್ಚು ರನ್​ಗಳ ಗುರಿ ಬೆನ್ನತ್ತಿ ಗೆದ್ದ ವಿಶೇಷ ದಾಖಲೆಯನ್ನು ಕೆಕೆಆರ್ ತನ್ನದಾಗಿಸಿಕೊಂಡಿದೆ.

ಇದಲ್ಲದೆ ಐಪಿಎಲ್​ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದ ಸಿಕ್ಸರ್ ಸರದಾರರ ಪಟ್ಟಿಗೂ ರಿಂಕು ಸಿಂಗ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್, ರಾಹುಲ್ ತೆವಾಠಿಯಾ, ರವೀಂದ್ರ ಜಡೇಜಾ ಮಾತ್ರ ಒಂದೇ ಓವರ್​ನಲ್ಲಿ 5 ಸಿಕ್ಸ್​ಗಳನ್ನು ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರಿಂಕು ಸಿಂಗ್.

ಹಾಗೆಯೇ ಐಪಿಎಲ್​ನ ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಅಂತಿಮ ಓವರ್​ನಲ್ಲಿ ಅಬ್ಬರಿಸುವ ಮೂಲಕ ರಿಂಕು ಸಿಂಗ್ ಇದೀಗ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ