ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಒಬ್ಬಬ್ಬೊರಾಗಿ ಹಸೆಮಣೆ ಏರುತ್ತಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಬುಲ್ ಬುಲ್ ಕ್ವೀನ್ ರಚಿತಾ ರಾಮ್ (Rachitha Ram) ಮದುವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಡಿಂಪಲ್ ಕ್ವೀನ್ ಮದುವೆಯಾಗುತ್ತಿರುವ ಹುಡುಗ ಯಾರು? ಅಷ್ಟಕ್ಕೂ ಅಸಲಿ ವಿಚಾರವೇನು ಎಂಬುದಕ್ಕೆ ಇಲ್ಲಿದೆ ಉತ್ತರ.
`ಬುಲ್ ಬುಲ್’ ಬೆಡಗಿ ರಚಿತಾ ರಾಮ್ ಸಿನಿಮಾರಂಗಕ್ಕೆ ಬಂದು 10 ವರ್ಷವಾಯ್ತು. ಇವತ್ತಿಗೂ ಅವರನ್ನ ಕೇಳೋ ಒಂದು ಪ್ರಶ್ನೆ ಅಂದ್ರೆ ಮದುವೆ ಯಾವಾಗ ಅಂತಾ ಅದಕ್ಕೆಲ್ಲಾ ಉತ್ತರ ಇದೀಗ ಸಿಕ್ಕಿದೆ. ಇತ್ತೀಚೆಗೆ ಅದಿತಿ ಪ್ರಭುದೇವಾ (Aditi Prabhudeva) ಮದುವೆ ಮತ್ತು ವಸಿಷ್ಠ- ಹರಿಪ್ರಿಯಾ ಎಂಗೇಜ್ಮೆಂಟ್ ಆಯ್ತು, ಅಂಬಿ ಪುತ್ರ ಅಭಿಷೇಕ್ ಮದುವೆಯ ಸುದ್ದಿಯ ಬೆನ್ನಲ್ಲೇ ರಚಿತಾ ರಾಮ್ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ.
ರಚಿತಾ ರಾಮ್ ಮನೆಯಲ್ಲಿ ಹುಡುಗ ಹುಡುಕುತ್ತಿದ್ದಾರಂತೆ. 2019ರಲ್ಲಿ ರಚಿತಾ ಸಹೋದರಿ ನಿತ್ಯಾ ರಾಮ್ (Nithya Ram) ಅವರ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಇದೀಗ ಅದೇ ರೀತಿ ಗೌಡ್ರ ಮನೆಯ ಹುಡುಗನನ್ನು ರಚಿತಾಗೆ ಹುಡುಕುತ್ತಿದ್ದಾರೆ. ಫಾರಿನ್ನಲ್ಲಿ ಮದುವೆ ಮಾಡುವ ಫ್ಲ್ಯಾನ್ನಲ್ಲಿದ್ದಾರೆ. ಫಿಕ್ಸ್ ಆಯ್ತು ಅಂದ್ರೆ ಆದಷ್ಟು ಬೇಗ ಗಟ್ಟಿಮೇಳ ಬಾರಿಸೋದೆ ಅಂತಾ ರಚ್ಚು ಫ್ಯಾಮಿಲಿ ನಿರ್ಧರಿಸಿದ್ದಾರೆ.
ಅಷ್ಟಕ್ಕೂ ರಚಿತಾ ಕುಟುಂಬ ಅಂದುಕೊಂಡಂತೆ ಆಯ್ತು ಅಂದರೆ ಸದ್ಯದಲ್ಲೇ ನಟಿ ಮದುವೆಯ ಗುಡ್ ನ್ಯೂಸ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist