![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಪೌತಿಖಾತೆ, ಆರ್.ಟಿ.ಸಿಯಲ್ಲಿ ಪಟ್ಟೇದಾರ/ಅವರ ಕುಟುಂಬಸ್ಥರ ಹೆಸರು ನಮೂದಿಸುವ ಸಂಬಂಧಿಸಿದಂತೆ ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ನಿಗದಿ ಪಡಿಸಬೇಕಾದ ಹಲವು ಪಕರಣಗಳನ್ನು ಕಂದಾಯ ನಿಗದಿ ಕೋದಿ ಸಾರ್ವಜನಿಕರಿಂದ ವ್ಯಾಪಕವಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಕಂದಾಯ ಗಡಿ ಪ್ರಕ್ರಿಯೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯಕ್ಕೆ ಬಾರದ ಸರ್ಕಾರಿ/ಪೈಸಾರಿ ಜಮೀನು ಹೊರತುಪಡಿಸಿ ಎಲ್ಲಾ ಬಾಣೆ ಜಮೀನುಗಳನ್ನು ಗುರುತಿಸಿ ಕಂದಾಯ ನಿಗದಿಗೊಳಿಸಲು ಉಲ್ಲೇಖ(1) ಮತ್ತು(2) ರ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಉಲ್ಲೇಖ(3) ರ ಸರಕಾರದ ಅಧಿಸೂಚನೆಯಂತೆ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 80 ಕ್ಕೆ ತಿದ್ದುಪಡಿಯಾದಂತೆ ಕ್ರಮವಹಿಸುವ ಬಗ್ಗೆ ಚರ್ಚಿಸಲಾಗಿರುತ್ತದೆ. ಈ ಬಗ್ಗೆ ಎಲ್ಲಾ ಭಾಗದ ಜಮೀನುಗಳನ್ನು ಗುರುತಿಸಿ, ಕಂದಾಯ ನಿಗದಿಗೊಳಿಸಲು ಮಡಿಕೇರಿ ತಾಲ್ಲೂಕಿನಲ್ಲಿ ಕೋಕೇರಿ ಗ್ರಾಮವನ್ನು ಸೋಮವಾರಪೇಟೆ ತಾಲ್ಲೂಕಿನಲ್ಲಿ ಬಿಳಿಗೇದಿ ಗ್ರಾಮವನ್ನು ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಬಿರುನಾಣಿ ಗ್ರಾಮವನ್ನು ಆಯ್ಕೆ ಮಾಡಲಾಗಿರುತ್ತದೆ.
ಆದ್ದರಿಂದ ಕಂದಾಯ ನಿಗದಿ ಬಗ್ಗೆ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕಂದಾಯ ನಿಗದಿ ಪ್ರಕ್ರಿಯೆ ನಡೆಸಲು ಸೂಚಿಸಿದೆ.
ಕಂದಾಯ ನಿಗದಿಗೊಳಿಸುವ ಜಮೀನಿನ ಆಕಾರಬಂದ್ ಮತ್ತು ಆರ್.ಟಿ.ಸಿ ನಿಯಮಾನುಸಾರ ತಾಳೆ
ಮಾಡಿಕೊಂಡು, ಪೈಕಿ ಪಹಣಿಗಳಿದ್ದಲ್ಲಿ ನಿಯಮಾನುಸಾರ ಒಟ್ಟುಗೂಡಿಸಿ ಕ್ರಮವಹಿಸುವುದು. ಭೌತಿಕವಾಗಿ ಜಮೀನಿನಲ್ಲಿ ಇರುವ ‘ಬಿ’ ಖರಾಬು ಜಮೀನುಗಳನ್ನು ನಕ್ಷೆಯಲ್ಲಿ ಗುರುತು ಮಾಡಿ ಖರಾಬು ಜಮೀನು ಹೊರತುಪಡಿಸಿ ‘ಏ’ ಖರಾಬು ಜಮೀನುಗಳಿಗೆ ಕಂದಾಯ ನಿಗದಿಗೊಳಿಸಲು ಕ್ರಮವಹಿಸುವುದು,
ಆದ್ದರಿಂದ ಕಂದಾಯ ನಿಗದಿ ಪ್ರಕ್ರಿಯೆ ನಡೆಸಲು ಆಯಾ ಗ್ರಾಮ ಮಟ್ಟದ ಗ್ರಾಮಲೆಕ್ಕಿಗರು ಹಾಗೂ ಹೋಬಳಿ ಮಟ್ಟದ ಉಪತಹಶೀಲ್ದಾರ್ ರವರು ಮತ್ತು ಕಂದಾಯ ಪರಿವೀಕ್ಷಕರು ಭೂ ಮಾಪಕರೊಂದಿಗೆ ಸಮನ್ವಯ ಸಾಧಿಸಿಕೊಂಡು, ಕಂದಾಯಕ್ಕೆ ಬಾರದ ಎಲ್ಲಾ ಜಮೀನುಗಳನ್ನು ಪಟ್ಟಿಮಾಡಿಕೊಂಡು ಕಂದಾಯ ನಿಗದಿ ಬಗ್ಗೆ ಸೂಕ್ತ ಕ್ರಮವಹಿಸುವುದು.
ಸದರಿ ಕಾರ್ಯದ ಪ್ರಗತಿ ಬಗ್ಗೆ ಭೂ ದಾಖಲೆಗಳ ಉಪನಿರ್ದೇಶಕರು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಆಯಾ ತಾಲ್ಲೂಕಿನ ತಹಶೀಲ್ದಾರ್ ಉಸ್ತುವಾರಿ ವಹಿಸಿ ಕಂದಾಯ ನಿಗದಿ ಬಗ್ಗೆ ಉಪವಿಭಾಗಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ ಎಂದು ಜಿಲ್ಲಾಧಿಕಾರಿಗಳು
13.4.2012ರಂದು
ಭೂ ದಾಖಲೆಗಳ ಉಪನಿರ್ದೇಶಕರು,ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮಡಿಕೇರಿ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು, ಭೂದಾಖಲೆಗಳ ಸಹಾಯಕ ನಿರ್ದೇಶಕರು, ಮಡಿಕೇರಿ ಸೋಮವಾರಪೇಟೆ ಹಾಗೂ ವಿರಾಜಪೇಟೆ ಇವರಿಗೆ ಆದೇಶ ಹೊರಡಿಸಿರುತ್ತಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist