ಕೊಡಗಿನ ಡಾ. ಮಂತರ್ ಗೌಡ ರವರು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದ ಕೃಷಿ ನವೋದ್ಯಮಗಳಿಗೆ (Agri startup) ಈ ಬಾರಿ ಕೇಂದ್ರ ಬಜೆಟ್ಟಿನಲ್ಲಿ ಅನುದಾನ ಮೀಸಲಿರಿಸಿದ ಸರ್ಕಾರ!!
ಮಡಿಕೇರಿ: ಕೊಡಗಿನ ಯುವ ನಾಯಕ ಡಾ. ಮಂತರ್ ಗೌಡ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದ ಕೃಷಿ ನವೋದ್ಯಮ (Agri startup) ಗಳಿಗೆ ಪ್ರಥಮ ಬಾರಿಗೆ ಕೇಂದ್ರ ಸರ್ಕಾರ ತನ್ನ ಬಜೆಟ್ಟಿನಲ್ಲಿ ಪ್ರೋತ್ಸಾಹಕ ಉತ್ತೇಜನ ನಿಧಿಯನ್ನು ಘೋಷಿಸಿದೆ.
ಕೊಡಗಿನಲ್ಲಿ ಅಭಿವೃದ್ಧಿ ಚಿಂತನೆಯ ಮೂಲಕ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ ಕೃಷಿ ಅಭಿವೃದ್ಧಿಗಾಗಿ ಆಧುನಿಕ ಪ್ರಪಂಚದಲ್ಲಿ ಕೃಷಿ ನವೋದ್ಯಮಗಳನ್ನು(Agri startup ) ಪ್ರೋತ್ಸಾಹಿಸಬೇಕು ಎಂದು ನಿರಂತರವಾಗಿ ಪ್ರತಿಪಾದಿಸುತ್ತಾ ಹಾಗೂ ಇವುಗಳ ಪ್ರೋತ್ಸಾಹಕ್ಕೆ ವಿಶೇಷ ನಿಧಿಯನ್ನು ಮೀಸಲಿರಿಸಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಾ ಬಂದಿದ್ದರು.
ಪ್ರಪ್ರಥಮ ಬಾರಿಗೆ ಈ ಬಾರಿ ಬಜೆಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಉತ್ತೇಜನ ನಿಧಿಯನ್ನು ಘೋಷಿಸಿದೆ. ದೇಶದ ಕೃಷಿ ಬೆಳವಣಿಗೆಗೆ ಕೃಷಿ ನವೋದ್ಯಮಗಳ ಪ್ರೋತ್ಸಾಹ ಬಹಳಷ್ಟು ಅಗತ್ಯ ಎಂದು ಮಂತರ್ ಗೌಡ ರವರು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಕೃಷಿಯಲ್ಲಿ ‘ಕೃಷಿ ನವೋದ್ಯಮ’ಗಳ ಪ್ರೋತ್ಸಾಹ ಬಹಳಷ್ಟು ಅಗತ್ಯ ಎಂದು ಡಾ. ಮಂತರ್ ಗೌಡ ಅವರ ಪ್ರತಿಪಾದನೆಗೆ ಹಾಗೂ ಅಗ್ರಹಕ್ಕೆ ಈಗ ಮಾನ್ಯತೆ ಸಿಕ್ಕಿದೆ ಎಂದು ಅಭಿಪ್ರಾಯಪಡಲಾಗಿದೆ.
ದೇಶದ ಕೃಷಿ ಬೆಳವಣಿಗೆಗೆ ಕೃಷಿ ನವೋದ್ಯಮಗಳ ಪಾತ್ರ ಭವಿಷ್ಯದಲ್ಲಿ ಬಹಳಷ್ಟು ಇದೆ ಎಂದು ಡಾ. ಮಂತರ್ ಗೌಡ ಸತತವಾಗಿ ಹೇಳುತ್ತಾ ಬಂದಿದ್ದರು. ಸರಕಾರ ಈ ಬಗ್ಗೆ ಗಮನ ಹರಿಸಿದರೆ ಮಾತ್ರ ಕೃಷಿ ಬೆಳವಣಿಗೆಯನ್ನು ನಾವು ಮಾಡಲು ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದರು.
ಕೇಂದ್ರ ಸರ್ಕಾರ ಬಜೆಟ್ಟಿನಲ್ಲಿ 24.85 ಕೋಟಿ ಹಣವನ್ನು ಪ್ರಥಮ ಬಾರಿಗೆ ಈ ನವೋದ್ಯಮಗಳಿಗೆ ಉತ್ತೇಜಕ ನಿಧಿಯಾಗಿ ಮೀಸಲು ಇರಿಸಿದೆ.