ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ!
Twitter
Facebook
LinkedIn
WhatsApp

ಮೈಸೂರು: ಮದಿರೆಯ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಾ ಎಡವಟ್ಟು ಮಾಡಿಕೊಂಡಿದ್ದು, ಮರ್ಮಾಂಗ ಕತ್ತರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಕರ್ನಾಟಕದ ಹುಣಸೂರಿನಲ್ಲಿ ನಡೆದಿದೆ.
ಹುಣಸೂರಿನ ತೊಂಡಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಎಡವಟ್ಟು ಮಾಡಿಕೊಂಡು ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾನೆ. ಕಂಟ ಪೂರ್ತಿ ಕುಡಿದು ಹುಚ್ಚಾಟವಾಡುತ್ತಾ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡ ರಾಜಶೆಟ್ಟಿ ಎಂಬಾತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಳೆದ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ, ತೂರಾಡುತ್ತಲೆ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.
ಸಲ್ಮ ಸಮಯದಲ್ಲೇ ನೋವಿನಿಂದ ಕೂಗಿಕೊಂಡಾಗ ಸ್ಥಳೀಯರು ಬಂದು ಆತನನ್ನು ಹುಣಸೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತ ಚೇತರಿಸಿಕೊಂಡಿದ್ದು, ಗ್ರಾಮಸ್ಥರು ಘಟನೆಗೆ ಆಚ್ಚರಿ ಜೊತೆಗೆ ಮುಜುಗರ ಕೂಡ ವ್ಯಕ್ತಪಡಿಸಿದ್ದಾರೆ.