ಶನಿವಾರ, ಮೇ 4, 2024
ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

Twitter
Facebook
LinkedIn
WhatsApp
Yogi CM 1

ಕಾರವಾರ: ಚುನಾವಣೆ (Election) ಸಮೀಪಿಸುತಿದ್ದಂತೆ ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ಆದರೆ ಕಾರವಾರದಲ್ಲಿ ಬಿಜೆಪಿ ಮಹಿಳಾ ಶಾಸಕಿ ರೂಪಾಲಿ ನಾಯ್ಕ್(Rupali Naik), ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೆ ವಿರೋಧಿಗಳ ಎದುರು ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು. ಕಾರವಾರದಲ್ಲಿ ಈ ಹಿಂದೆ ಮಾಜಿ ಶಾಸಕ ಸತೀಶ್ ಸೈಲ್((Sathish Sail) , ಹಾಲಿ ಶಾಸಕಿ ರೂಪಾಲಿ ನಾಯ್ಕ್ ಕಿತ್ತಾಟ ಠಾಣೆ ಮೆಟ್ಟಿಲೇರಿ ದೂರು ಪ್ರತಿದೂರುಗಳು ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾರವಾರ ಶಾಸಕಿ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡಿದ್ದು ರಾಜಕೀಯ ಬಣ್ಣ ರಂಗೇರಿದೆ.

ತಮ್ಮ ಮನೆಯ ಮುಂದಿರುವ ಬೀದಿ ದೀಪ ತೆಗೆದು ಹೆದರಿಸುತ್ತಾರೆ. ಟ್ರಕ್ ಮೂಲಕ ನನ್ನ ವಾಹನಕ್ಕೆ ಡಿಕ್ಕಿಯಾಗಿಸಲು ಬರುತ್ತಾರೆ. ಕಾರಿನಲ್ಲಿ ಫಾಲೋ ಮಾಡುತ್ತಾರೆ. ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ರು. ಈ ಹಿಂದೆಯೂ ಮಾಡಿದ್ರು, ಈಗಲೂ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

ಜೊತೆಗೆ ಜೀವ ಬೆದರಿಕೆ (Threat For Rupali Naik) ಹಾಕುತ್ತಿರುವವರು ಯಾರು ಏನು ಗೊತ್ತಾಗುತ್ತಿಲ್ಲ. ನನಗೆ ಅನೇಕ ಮಂದಿ ವಿರೋಧಿಗಳು ಇದ್ದಾರೆ. ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ. ಮಹಿಳೆಯ ಮುಂದೆ ಬರುವುದನ್ನು ನೋಡಕ್ಕಾಗದೆ, ಅಭಿವೃದ್ಧಿ ಸಹಿಸದೇ ಇರುವವರು ಇದ್ದಾರೆ. ಈ ಬಗ್ಗೆ ಹಿಂದಿನ ಎಸ್.ಪಿ ಯವರಿಗೂ ತಿಳಿಸಿದ್ದೆ. ಈಗಿನ ಎಸ್.ಪಿಯವರಿಗೂ ತಿಳಿಸಿದ್ದೇನೆ. ಭದ್ರತೆ ನೀಡಿದ್ದಾರೆ. ಈಗಲೂ ಮತ್ತೆ ದೂರು ಕೊಡುತ್ತಿದ್ದೇನೆ. ನನಗೆ ಬೆದರಿಕೆ ನೀಡಿದ್ರೆ ಹೆದರಿಕೊಂಡು ದೂರ ಸರೀತಾರೆ ಎಂದು ಅಂದುಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವುದೂ ಇಲ್ಲ, ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇನೆ ಎಂದು ರೂಪಾಲಿ ನಾಯ್ಕ್ ಹೇಳಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಇದೀಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಶಾಸಕರಿಗೆ ಯಾರು ಹೆದರಿಸಿದ್ದಾರೋ ಗೊತ್ತಿಲ್ಲ, ಆದರೆ ಈ ಬೆಳವಣಿಗೆ ಸರಿಯಲ್ಲ. ಇಬ್ಬರೂ ಸ್ಟೇಟ್ಮೆಂಟ್ ಕೊಡೋದನ್ನ ಕಡಿಮೆ ಮಾಡಬೇಕು, ಯಾರೂ ಏನೇ ಹೇಳಲಿ ಮುಂಬರುವ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದು ಅವರದ್ದೇ ಪಕ್ಷದ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಲಿ-ಮಾಜಿಗಳಿಗೆ ಟಾಂಗ್ ನೀಡಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ್ ಬೆದರಿಕೆ ಕುರಿತು ಹೇಳಿಕೆ ನೀಡುತ್ತಿದ್ದಂತೆ ಪೊಲೀಸ್ ಇಲಾಖೆಯಿಂದಲೂ ಭದ್ರತೆ ಹೆಚ್ಚಿಸಲಾಗಿದೆ. ಇವುಗಳ ನಡುವೆ ಕಾರವಾರದಲ್ಲಿ ಮಾಜಿ-ಹಾಲಿಗಳ ಜಗಳ ಅತಿರೇಕಕ್ಕೆ ಹೋಗುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಯಾವ ಹಂತಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ