ಕಳೆದ ಚುನಾವಣೆಯಲ್ಲಿ 35,000 ಮತ ಪಡೆದ ಮಡಿಕೇರಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಪಡೆದ ಮತ 84,000. ಬಿಜೆಪಿ ಭದ್ರಕೋಟೆಯಲ್ಲಿ ಡಾ. ಮಂತರ್ ಗೌಡ ಗೆಲುವೇ ರೋಚಕ!!
ಮಡಿಕೇರಿ; ಸತತ ಮೂರು ಚುನಾವಣೆಗಳಲ್ಲಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಮಡಿಕೇರಿ ಕಾಂಗ್ರೆಸ್ ನ ಅಭ್ಯರ್ಥಿ ಡಾ. ಮಂತರ್ ಗೌಡ ಈ ಬಾರಿ ಇಡೀ ರಾಜ್ಯವೇ ಮೆಚ್ಚುವಂತೆ ತನ್ನ ಸಾಧನೆಯನ್ನು ತೋರ್ಪಡಿಸಿದ್ದಾರೆ.
2008ರ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ಕಾಂಗ್ರೆಸ್ ಇಲ್ಲಿ ಪಡೆದದ್ದು ಕೇವಲ 32,೦೦೦ ಮತಗಳನ್ನು.2013 ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಮಡಿಕೇರಿಯಲ್ಲಿ ಮತ್ತೆ ಮೂರನೇ ಸ್ಥಾನ ಪಡೆದ ಕಾಂಗ್ರೆಸ್ ಪಡೆದ ಮತಗಳು ಕೇವಲ 38,0000.
2018ರ ಚುನಾವಣೆಯಲ್ಲಿ ಮತ್ತೆ ಮೂರನೇ ಸ್ಥಾನ ಪಡೆದ ಕಾಂಗ್ರೆಸ್ ಪಡೆದ ಮತಗಳು 35,000.
ಈ ಬಾರಿ ಡಾ. ಮಂತರ್ ಗೌಡ ಕೇವಲ ಎಂಟು ತಿಂಗಳ ಹಿಂದೆ ಕಣಕ್ಕೆ ಇಳಿದಿದ್ದರು. ಆರು ತಿಂಗಳ ಹಿಂದೆ ತನ್ನ ಸಾಮಾಜಿಕ ಜಾಲತಾಣದ ಅಗ್ರೆಸ್ಸಿವ್ ಕ್ಯಾಂಪೆಯೆನ್ ಆರಂಭ ಮಾಡಿದ್ದರು.
ಆದರೆ ಜಯಗಳಿಸಲು ಬರೋಬ್ಬರಿ ಐವತ್ತು ಸಾವಿರಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಬೇಕಾಗಿತ್ತು. ಎಲ್ಲರೂ ಅಸಾಧ್ಯ ಎಂದು ಭಾವಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಗೆಲ್ಲಲು ಅಸಾಧ್ಯವಾದ ಸ್ಥಾನ ಎಂದು ಪರಿಗಣಿಸಿ ಸಿ ಕೆಟಗರಿಯಲ್ಲಿ ಇಟ್ಟಿತ್ತು.
ಹಲವು ಚುನಾವಣಾ ಆಕಾಂಕ್ಷಿಗಳ ನಡುವೆ ಡಾ. ಮಂಥರ್ ಗೌಡ ರವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಪ್ರಚಾರ ಜೋರಾಗಿತ್ತು. ಕೊನೆಗೆ ಎರಡನೇ ಪಟ್ಟಿಯಲ್ಲಿ ಬಹಳಷ್ಟು ಕಷ್ಟಪಟ್ಟು ಟಿಕೆಟ್ ಪಡೆದುಕೊಂಡರು.
ಆದರೆ ಚುನಾವಣೆ ಮುಗಿಯಬೇಕಾದರೆ ನಾಲ್ಕು ದಿನ ಇರುವಾಗ ಹಿರಿಯ ಕಾಂಗ್ರೆಸ್ ನಾಯಕ ಜೀವಿಜಯ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಬೆಂಬಲಿಸಿದ್ದರು. ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರುಗಳು ಪಕ್ಷ ಬಿಟ್ಟರು.
ಇಂಥ ಸ್ಥಿತಿಯಲ್ಲಿ ಡಾ. ಮಂತರ್ ಗೌಡ ವಿಜಯ ಎಂದು ವಿಶ್ಲೇಷಕರು ನಂಬಿದ್ದರು. ಕಾರಣ ಪಡೆಯಬೇಕಾಗಿದ್ದ ಮತಗಳು ಬರೋಬ್ಬರಿ ಐವತ್ತು ಸಾವಿರ ಹೆಚ್ಚುವರಿ. ಪ್ರಬಲ ಹಿಂದುತ್ವದ ಹಾಗೂ ಬಿಜೆಪಿ ಭದ್ರಕೋಟೆಯಲ್ಲಿ ಇದು ಅಸಾಧ್ಯ ಎಂದು ಭಾವಿಸಲಾಗಿತ್ತು.
ಆದರೆ ಅಗ್ರೆಸ್ಸಿವ್ ಸಾಮಾಜಿಕ ಜಾಲತಾಣದ ಪ್ರಚಾರ, ಡಾ. ಮಂತರ್ ಗೌಡ ಪರವಾದ ಚುನಾವಣಾ ತಂತ್ರಗಾರಿಕೆ ಅಲೆಯನ್ನು ತನ್ನ ಪರವಾಗಿ ಇಟ್ಟುಕೊಳ್ಳುವಲ್ಲಿ ಸಫಲವಾಗಿತ್ತು. ಅನುಭವಿ ಚುನಾವಣಾ ತಜ್ಞರು ಈ ಅಲೆಯನ್ನು ಬಿಜೆಪಿ ಹಾಳುಮಾಡದಂತೆ ಸಾಮಾಜಿಕ ಜಾಲತಾಣದ ಪ್ರಚಾರದಲ್ಲಿ ನಿಗಾ ವಹಿಸಿದ್ದರು.ಡಾ. ಮಂಥರ್ ಗೌಡ ಯೋಚನೆ -ಯೋಜನೆಯ ಸಮೃದ್ಧ ಕೊಡಗು, ಅಭಿವೃದ್ಧಿ ಚಿಂತಕ, ಅಭಿವೃದ್ಧಿಯ ಗಟ್ಟಿ ಧ್ವನಿ, ಈ ಬಾರಿ ಮಡಿಕೇರಿಗೆ ಡಾ. ಮಂತರ್ ಗೌಡ ಎಂಬ ಪ್ರಚಾರಗಳು ಬಿಜೆಪಿಯನ್ನು ಕಟ್ಟಿ ಹಾಕುವ ಯಶಸ್ವಿಯಾಗಿದ್ದವು.ಈ ಚುನಾವಣೆ ತಂತ್ರಗಾರಿಕೆಯನ್ನು ಮಂಗಳೂರು ಮೂಲದ ಅನುಭವಿ ಚುನಾವಣಾ ತಜ್ಞರೊಬ್ಬರು ಹೆಣೆದಿದ್ದರೂ ಎಂದು ತಿಳಿದುಬಂದಿದೆ.
ಡಾ. ಮಂತರ್ ಗೌಡ ಎಲ್ಲಿಯೂ ಅನಗತ್ಯವಾಗಿ, ವಿವಾದಾತ್ಮಕ ಹೇಳಿಕೆಗಳನ್ನು ನೀಡಲಿಲ್ಲ. ಪಕ್ಕ ತಂತ್ರಗಾರಿಕೆಯಿಂದಾಗಿ ಬಿಜೆಪಿಗೆ ಡಾ. ಮಂಥರ್ ಗೌಡ ಚಕ್ರವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಹೈಕಮಾಂಡ್ ವಿಜಯ ಆಗಲು ಸಾಧ್ಯವಿಲ್ಲ ಹಾಗೂ ಹೆಚ್ಚು ಅಂದರೆ 20,000 ಹೆಚ್ಚು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಿತ್ತೂ,ಆ ಕ್ಷೇತ್ರದಲ್ಲಿ ಬರೋಬ್ಬರಿ 50,000 ಹೆಚ್ಚು ಮತಗಳನ್ನು ಪಡೆದು ಒಟ್ಟಾರೆ 84,000 ಮತ ಪಡೆಯುವ ಮೂಲಕ ಇಡೀ ರಾಜ್ಯದಲ್ಲಿ ಅಚ್ಚರಿಯ ಫಲಿತಾಂಶವನ್ನು ಡಾ. ಮಂಥರ್ ಗೌಡ ತಂದಿದ್ದಾರೆ.