ಕಳೆದ ಒಂದು ವಾರದಲ್ಲಿ ಕೊಡಗು,ದ.ಕ ದಲ್ಲಿ ಕಾಡಾನೆ ನಾಲ್ಕು ಜನರ ಜೀವ ಪಡೆದಿದೆ. ಮುಖ್ಯಮಂತ್ರಿಗಳು ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದ ಡಾ. ಮಂತರ್ ಗೌಡ
Twitter
Facebook
LinkedIn
WhatsApp
ಮಡಿಕೇರಿ: ಕೊಡಗಿನಲ್ಲಿ ಎರಡು ಜನರು, ಇಂದು ದಕ್ಷಿಣ ಕನ್ನಡದ ಕಡಬದಲ್ಲಿ ಎರಡು ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಇದೊಂದು ಗಂಭೀರ ವಿಷಯ. ಮುಖ್ಯಮಂತ್ರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಈ ಬಗ್ಗೆ ವಿಶೇಷ ಸಭೆಯನ್ನು ಕರೆಯಬೇಕು ಎಂದು ಕೊಡಗಿನ ಕಾಂಗ್ರೆಸ್ ಯುವನಾಯಕ ಡಾ. ಮಂತರ್ ಗೌಡ ಅಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ವನ್ಯಜೀವಿಗಳ ದಾಳಿಗೆ ಮಲೆನಾಡು ಪ್ರದೇಶಗಳಲ್ಲಿ ಜನರು ಜೀವ ಭಯದಿಂದ ಬದುಕುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಜನರು ಈ ಪ್ರದೇಶದಲ್ಲಿ ಹೇಗೆ ಬದುಕುತಿದ್ದಾರೆ ಎಂಬ ಅರಿವು ಸರಕಾರಕ್ಕೆ ಬೇಕಾಗಿದೆ. ದಿನನಿತ್ಯ ಜನರಿಗೆ ಸಂಚಾರ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಡಾ. ಮಂತರ್ ಗೌಡ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ರವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದು ಈ ಬಗ್ಗೆ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.