ಮಂಗಳೂರು; ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್ ಸರ್ವರ್ ಗಳು ಸರಿಯಾದ ಸಮಯಕ್ಕೆ ಸಿಗದೆ ನಾಗರಿಕರು, ವಕೀಲರು ಹಾಗೂ ಇತರ ಡಾಕ್ಯುಮೆಂಟ್ ಕೆಲಸ ಮಾಡುವವರು ತೊಂದರೆ ಅನುಭವಿಸುತ್ತಿರುವುದು ಮತ್ತೆ ಮುಂದುವರಿದಿದೆ. ಡಾಕ್ಯುಮೆಂಟ್ ಸಮಸ್ಯೆ ಎಷ್ಟು ಭೀಕರವಾಗಿದೆ ಎಂದರೆ ಕೆಲವು ಬಾರಿ ಒಂದು ವಾರ ಸಹ ಅಪ್ ಲೋಡ್ಡಿಗೆ ತೆಗೆದುಕೊಂಡದ್ದು ಇದೆ.
ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!
Twitter
Facebook
LinkedIn
WhatsApp

ಇದರಿಂದ ಸಬ್ ರಿಜಿಸ್ಟರ್ ಆಫೀಸಿನ ನೌಕರರು ಸಹ ನಾಗರಿಕರಿಗೆ ಉತ್ತರಿಸಲಾಗಿದೆ ತಡಕಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನು ಬಹುದೊಡ್ಡ ಯೋಜನೆ ಎಂದು ಹೇಳುತ್ತಿದ್ದರೂ, ಅದರ ಅನುಷ್ಠಾನಕ್ಕೆ ಸರಿಯಾದ ಕ್ರಮವಹಿಸಲಿದಿರುವುದರ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮಹತ್ವಕಾಂಕ್ಷಿ ಈ ಯೋಜನೆ ಹಿಂದಿನಗಿಂತಲೂ ಹೆಚ್ಚು ತೊಂದರೆಯನ್ನು ಉಂಟು ಮಾಡುತ್ತಿದ್ದು, ಇದರಿಂದ ರಾತ್ರಿ ಹಗಲು ಸರ್ವರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದು ಒದಗಿದೆ ಎಂದು ವಕೀಲರೂಬ್ಬರು ಅಭಿಪ್ರಾಯ ಪಡುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪ್ಲೋಡ್ಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ಕುಳಿತಿರಬೇಕಾದ ಸಮಸ್ಯೆ ಬಂದಿದೆ ಎಂದು ಯುವ ವಕೀಲರು ಅಭಿಪ್ರಾಯ ಪಡುತ್ತಾರೆ. ಒಂದು ಡಾಕ್ಯುಮೆಂಟ್ ಆಫ್ ಲೋಡ್ ಗೆ ಮೂರು ದಿನ ಕಾದಿದ್ದೇನೆ ಎಂದು ಯುವ ವಕೀಲರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ
ಬೆಳಿಗ್ಗೆ ಹೊತ್ತುಗಳಲ್ಲಿ ಸರ್ವರ್ ಸಿಗುವುದೇ ಅಪರೂಪವಾಗಿದೆ. ಇದರಿಂದ ತಮ್ಮ ಕಕ್ಷಿಧಾರರಿಗೆ ಸರಿಯಾದ ಸಮಯಕ್ಕೆ ದಿನ ನಿಗದಿಪಡಿಸಲು ಬಹಳಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದು ಹೆಚ್ಚಿನ ಡಾಕ್ಯುಮೆಂಟ್ ಕೆಲಸ ಮಾಡುವವರು ಅಭಿಪ್ರಾಯ ಪಡುತ್ತಾರೆ