ಕಲ್ಲಿದ್ದಲು ಸಾಗಿಸುವ ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವು
Twitter
Facebook
LinkedIn
WhatsApp
ರಾಯಚೂರು: ಕಲ್ಲಿದ್ದಲು ಸಾಗಿಸುವ ರೈಲಿನ (Train) ರೇಕ್ ಹರಿದು ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
ರಾಯಚೂರಿನ ಶಕ್ತಿನಗರದ (Shaktinagar) ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಗುತ್ತಿಗೆ ಕಾರ್ಮಿಕ ನಾಗರಾಜ್ (32) ರುಂಡ ಮುಂಡ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಗರಾಜ್ ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸ ಮಾಡುತ್ತಿದ್ದು, ಕೆಲಸದ ವೇಳೆ ರೈಲಿಗೆ ಆಕಸ್ಮಿಕವಾಗಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.