ಕರಾವಳಿ ಮಲೆನಾಡುಗಳಲ್ಲಿ ಹೊಸ ಮುಖದ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್. ಕೊಡಗಿನಲ್ಲಿ ವಿರಾಜಪೇಟೆಗೆ ಪೊನ್ನನ್ನ, ಮಡಿಕೇರಿಗೆ ಮಂತರ್ ಗೌಡ ಬಹುತೇಕ ಫಿಕ್ಸ್.
ಮಡಿಕೇರಿ: ಕೊಡಗಿನಲ್ಲಿ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಹೊಸಮುಖ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ವಿರಾಜಪೇಟೆಗೆ ಪೊನ್ನನ್ನ, ಮಡಿಕೇರಿಗೆ ಡಾ. ಮಂತರ್ ಗೌಡ ಬಹುತೇಕ ಅಂತಿಮ ಎಂದು ವರದಿಯಾಗಿದೆ.
ಈಗ ಬಿಜೆಪಿಯ ಕೆಜಿ ಬೋಪ್ಪಯ್ಯ ಪ್ರತಿನಿಧಿಸುತ್ತಿರುವ ವಿರಾಜಪೇಟೆ ಕ್ಷೇತ್ರಕ್ಕೆ ಹೈಕೋರ್ಟ್ ನ ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಎ ಎಸ್ ಪೊನ್ನನ್ನ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ಕೊಡಗಿನಲ್ಲಿ ಅಭಿವೃದ್ಧಿ ಚಿಂತನೆಯ ಮೂಲಕ ಸಂಚಲನ ಮೂಡಿಸಿದ ಡಾ. ಮಂತರ್ ಗೌಡ ಫಿಕ್ಸ್ ಆಗಿದ್ದಾರೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ.
ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ಹೈಕೋರ್ಟ್ ವಕೀಲರಾದ ಎಎಸ್ ಪೊನ್ನಣ್ಣ ಈ ಮೊದಲು ಕಾಂಗ್ರೆಸ್ ವಕೀಲರ ಹಾಗೂ ಮಾನವ ಹಕ್ಕು ವಿಭಾಗದ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷಗಳಿಂದ ವಿರಾಜಪೇಟೆ ಕ್ಷೇತ್ರದಲ್ಲಿ ನಿರಂತರ ಜನ ಸಂಪರ್ಕದ ಮೂಲಕ ಕಾಂಗ್ರೆಸ್ ಬೆಳವಣಿಗೆಗೆ ಕೆಲಸ ಮಾಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ತನ್ನ ಟ್ರಸ್ಟ್ ಮೂಲಕ ಹಲವಾರು ಜನ ಸೇವ ಕಾರ್ಯಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗಿನಲ್ಲಿ ತನ್ನ ನೂತನ ಅಭಿವೃದ್ಧಿ ಚಿಂತನೆಗಳಿಂದ ಸಂಚಲನ ಸೃಷ್ಟಿ ಮಾಡಿದ ಅಭಿವೃದ್ಧಿ ಚಿಂತಕ ಎಂದು ಖ್ಯಾತಿಗಳಿಸಿದ ಡಾ. ಮಂತರ್ ಗೌಡ ಫಿಕ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೊಡಗಿನಲ್ಲಿ ತನ್ನ ಅಭಿವೃದ್ದಿ ಚಿಂತನೆಗಳಿಂದ ಕಳೆದ ಮೂರು ತಿಂಗಳುಗಳಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಡಾ. ಮಂತರ್ ಗೌಡ ಕಾಂಗ್ರೆಸ್ಸಿಗೆ ನವ ಚೈತನ್ಯ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕೊಡಗಿನ ಕಾಂಗ್ರೆಸ್ಸಿಗೆ ಆಗಮಿಸಿ, ಇಡೀ ಕೊಡಗಿನಲ್ಲಿ ಡಾ. ಮಂತರ್ ಗೌಡ ಕೆಲವೇ ತಿಂಗಳುಗಳಲ್ಲಿ ಅಭಿವೃದ್ಧಿ ಚಿಂತನೆಗಳಿಂದ ಸಂಚಲನ ಸೃಷ್ಟಿ ಮಾಡಿದ್ದಾರೆ. ಉದ್ಯೋಗ, ಕೃಷಿ ಬೆಳವಣಿಗೆ, ಮಹಿಳಾ ಸಬಲೀಕರಣ ಈ ರೀತಿಯಾಗಿ ವಿವಿಧ ವಿಷಯಗಳ ಮೇಲಿನ ಅವರ ಚಿಂತನೆಗಳು ಜನಸಾಮಾನ್ಯರನ್ನು ಕೊಡಗಿನಲ್ಲಿ ಬಹುವಾಗಿ ಆಕರ್ಷಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಮಡಿಕೇರಿ ಕ್ಷೇತ್ರವನ್ನು ಬಿಜೆಪಿಯ ಅಪ್ಪಚ್ಚು ರಂಜನ್ ರವರು ಪ್ರತಿನಿಧಿಸುತ್ತಿದ್ದಾರೆ.
ವೀರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ನಲ್ಲಿ ಹಲವು ಅಭ್ಯರ್ಥಿಗಳಿದ್ದರು. ಆದರೆ ಗೌಪ್ಯವಾಗಿ ಹೈಕಮಾಂಡ್ ಈ ಎರಡು ಅಭ್ಯರ್ಥಿಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಬಿಜೆಪಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತದೆ ಅಥವಾ ಹಾಲಿ ಅಭ್ಯರ್ಥಿಗಳನ್ನು ಮುಂದುವರಿಸುತ್ತದೆ ಎಂಬುದರಲ್ಲಿ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಕೊಡಗಿನ ಎರಡು ಕ್ಷೇತ್ರಗಳು ಈಗ ಹೊಸ ಮುಖಗಳಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೊಸ ಮುಖದ ಪ್ರಯೋಗಕ್ಕೆ ಸಿದ್ಧವಾಗಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.