ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕಡೂರು -ತರೀಕೆರೆ ತಾಲ್ಲುಕುಗಳಲ್ಲಿ ವೇರ್ ಹೌಸ್ -ಕೋಲ್ಡ್ ಸ್ಟೋರೇಜ್‌ ಸ್ಥಾಪನೆ : ಕೇಂದ್ರ ಸಚಿವೆ ಶೋಭಾ

Twitter
Facebook
LinkedIn
WhatsApp
ಕಡೂರು -ತರೀಕೆರೆ ತಾಲ್ಲುಕುಗಳಲ್ಲಿ ವೇರ್ ಹೌಸ್ -ಕೋಲ್ಡ್ ಸ್ಟೋರೇಜ್‌ ಸ್ಥಾಪನೆ :ಕೇಂದ್ರ ಸಚಿವೆ ಶೋಭಾ

ಚಿಕ್ಕಮಗಳೂರು: ಹಣ್ಣು, ತರಕಾರಿ ಇನ್ನಿತರೆ ಉತ್ಪನ್ನಗಳನ್ನು ಸಂರಕ್ಷಿಸಿಡಲು ನಮ್ಮ ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲುಕುಗಳಲ್ಲಿ ವೇರ್ ಹೌಸ್ ಮತ್ತು ಕೋಲ್ಡ್ ಸ್ಟೋರೇಜ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸಂಬಂಧ ಎಲ್ಲೆಲ್ಲಿ ಇದರ ಅಗತ್ಯ ಇದೆ ಎನ್ನುವುದರ ಕುರಿತು ವರದಿ ನೀಡುವಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೃಷಿ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಕೊಳೆಯಲ್ಪಡುವಂತಹ ಬೆಳೆಗಳನ್ನು ಸಂರಕ್ಷಿಸಿಡುವ ಸಲುವಾಗಿ ಇಂತಹ ಬೆಳೆ ಬೆಳೆಯುವ ಕಡೆ ವೇರ್ ಹೌಸ್ ಮತ್ತು ಕೋಲ್ಡ್ ಸ್ಟೋರೇಜ್‌ಗಳನ್ನು ಮಾಡಲು ಕೇಂದ್ರ ಆದ್ಯತೆ ಕೊಡುತ್ತಿದೆ ಎಂದರು.
ದೇಶದಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಉತ್ಪಾಧನೆ ಹೆಚ್ಚಾಗಿದೆ. ನಮ್ಮ ದೇಶದ ಜನರಿಗೆ ಆಗಿ ಉಳಿಯುತ್ತಿದೆ. ಸುಮಾರು ೩೦೫ ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಮತ್ತು ೩೨೬ ಮಿಲಿಯನ್ ಮೆಟ್ರಿಕ್ ಟನ್ ತರಕಾರಿ ಮತ್ತು ಹಣ್ಣುಗಳನ್ನು ಕಳೆದ ಒಂದು ವರ್ಷದಲ್ಲಿ ಬೆಳೆಯಲಾಗಿದೆ. ಈ ವರ್ಷ ಅದು ಇನ್ನೂ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.
ಅಷ್ಟು ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆದರೆ ಸಹಜವಾಗಿ ಸಾಕಷ್ಟು ಹಾಳಾಗುತ್ತದೆ. ನಾವು ಅದನ್ನು ಮಾರ್ಕೆಟಿಂಗ್ ಮಾಡಲೇ ಬೇಕಿರುವುದರಿಂದ ಆಹಾರ ಸಂಸ್ಕರಣೆ ಮತ್ತು ರಫ್ತಿಗೆ ಕೇಂದ್ರ ಸರ್ಕಾರ ಆಧ್ಯತೆ ನೀಡುತ್ತಿದೆ. ಈ ವರ್ಷವೇ ಸಾಕಷ್ಟು ತಾಜಾ ಹಣ್ಣು ಮತ್ತು ಸಂಸ್ಕರಿತ ಆಹಾರ ಪಾದಾರ್ಥವನ್ನು ರಫ್ತು ಮಾಡಲಾಗಿದೆ ಎಂದರು.
ಹೆಚ್ಚಿನ ವೇಳೆ ರಫ್ತು ಮಾಡಲು ಸಾಧ್ಯವಾಗದಿದ್ದಾಗ ಅದನ್ನು ಸಂಸ್ಕರಣೆ ಮಾಡಿ ಸಂರಕ್ಷಿಸಿಡಬೇಕಾಗುತ್ತದೆ. ಅದಕ್ಕಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಕೃಷಿ ಇಲಾಖೆ ಮತ್ತು ಅಪೇಡ ಸಂಸ್ಥೆಯ ಸಭೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಭೆ ನಡೆದಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತುದಾರರು ಅದರಲ್ಲಿ ಭಾಗವಹಿಸಿದ್ದರು.

ಗುಣಮಟ್ಟದ ಆಹಾರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಏನು ಮಾಡಬಹುದು ಎನ್ನುವ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ ಎಂದರು. ಇದಕ್ಕಾಗಿ ಉತ್ಪಾದನೆಗೆ ಮೊದಲೇ ರೈತರಿಗೆ ಅಗತ್ಯ ತರಬೇತಿ, ಮಾರ್ಗದರ್ಶನಗಳನ್ನು ನೀಡಬೇಕು. ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಯನ್ನು ಬಲಗೊಳಿಸಲು ಆಧ್ಯತೆ ನೀಡಲಾಗುತ್ತಿದೆ. ವಿದೇಶಿ ಪ್ರತಿನಿಧಿಗಳ ಜೊತೆ ಸಮಾಲೋಚಿಸಲಾಗುತ್ತಿದೆ. ಯಾವ ಯಾವ ದೇಶಕ್ಕೆ ಯಾವ ಆಹಾರ ಪದಾರ್ಥ ಬೇಕು. ಅಲ್ಲಿಯ ಅಗತ್ಯತೆ ಏನು ಎನ್ನುವುದನ್ನು ಪಟ್ಟಿ ಮಾಡಿ ಅದರ ಆಧಾರದಲ್ಲಿ ಅಗ್ರಿ ಮಾರ್ಕೆಟಿಂಗ್ ಹಾಗೂ ಅಗ್ರಿ ಬ್ಯುಸಿನೆಸ್‌ಗಳನ್ನು ಉತ್ತೇಜಿಸಬೇಕು ಎನ್ನುವುದು ನಮ್ಮ ಆಧ್ಯತೆ ಎಂದರು.
ಈ ಬಾರಿ ನಮ್ಮ ಆಧ್ಯತೆ ಎಣ್ಣೆಕಾಳುಗಳ ಮೇಲೆ. ಆಹಾರ ಧಾನ್ಯಗಳನ್ನು ಅಗತ್ಯಕ್ಕಿಂತ ಹೆಚ್ಚು ಬೆಳೆಯುತ್ತಿದ್ದರೂ ಎಣ್ಣೆ ಕಾಳುಗಳನ್ನು ಶೇ.೭೦ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ದೊಡ್ಡ ಪ್ರಮಾಣದ ವಿದೇಶೀ ವಿನಿಮಯ ಇದರಿಂದ ಹೊರಕ್ಕೆ ಹೋಗುತ್ತಿದೆ. ಅದಕ್ಕಾಗಿ ಎಣ್ಣೆ ಕಾಳುಗಳಿಗೆ ಆಧ್ಯತೆ ಕೊಟ್ಟು ಸೂರ್ಯಕಾಂತಿ, ನೆಲಗಡಲೆ, ಸೋಯಾಬೀನ್, ಸಾಸಿವೆ ಬೆಳೆಗೆ ಉತ್ತೇಜನ ನೀಡಲು ತೀರ್ಮಾನಿಸಿದೆ ಎಂದರು.
ಇದಕ್ಕಾಗಿ ಉಚಿತ ಎಣ್ಣೆಕಾಳು ಬೀಜಗಳ ಕಿಟ್‌ಗಳನ್ನು ಕೊಡಲಾಗುತ್ತಿದೆ. ಸಹಾಯಧನ ಗಳನ್ನು ನೀಡಲಾಗುತ್ತಿದೆ. ೧೦ ಸಾವಿರ ರೈತ ಉತ್ಪಾಧಕ ಸಂಘಗಳನ್ನು ರಚಿಸುವುದು, ಎಣ್ಣೆಕಾಳುಗಳ ಬೆಳೆಗೆ ಉತ್ತೇಜನ ನೀಡುವುದು ನಮ್ಮ ಗುರಿ ಎಂದು ಹೇಳಿದರು.
ಕೇಂದ್ರದ ಕೃಷಿ ಬಜೆಟ್ ಸಹ ಹೆಚ್ಚಾಗುತ್ತಲೇ ಇದೆ. ೨೦೧೩-೧೪ ರ ಯುಪಿಎ ಸರ್ಕಾರ ಇದ್ದಾಗ ಕೃಷಿಗೆ ಇದ್ದದ್ದು ೨೩ ಸಾವಿರ ಕೋಟಿ ರೂ. ಈಗ ದೇಶದ ಬಜೆಟ್ ೧ ಲಕ್ಷ ೨೩ ಸಾವಿರ ಕೋಟಿ ರೂ. ಕೃಷಿಗೆ ೮೫೦೦ ಕೋಟಿ ರೂ. ಕೃಷಿ ಸಂಶೋಧನೆಗೆ ಮೀಸಲಿಡಲಾಗುತ್ತಿದೆ. ಕೇವಲ ೬ ವರ್ಷದಲ್ಲಿ ಇಷ್ಟೊಂದು ಅಂತರವಿದೆ. ಇದೆಲ್ಲವೂ ಕೂಡ ರೈತರಿಗೆ ಹೋಗುತ್ತಿದೆ ಎಂದರು.
ಸುಮಾರು ೧೧ ಕೋಟಿ ರೈತರಿಗೆ ೧ಲಕ್ಷ ೫೮ ಸಾವಿರ ಕೋಟಿ ರೂ. ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗಿದೆ. ಫಸಲ್ ಭೀಮಾ ಯೋಜನೆಯನ್ನು ಸರಳೀಕರಣಗೊಳಿಸಿದ್ದೇವೆ. ಈ ರೀತಿ ಹಲವಾರು ಯೋಜನೆಗಳು ನಡೆಯುತ್ತಿವೆ ಎಂದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು