ಹಾಂಕಾಂಗ್: ಚೀನದ ಆಡಳಿತವಿರುವ ಹಾಂಕಾಂಗ್ ಪಟ್ಟಣದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ನ ಹಾವಳಿ ತೀವ್ರವಾಗಿದ್ದು, ಕಳೆದ 3 ತಿಂಗಳಿನಲ್ಲಿ 4,600 ಸಾವು ಸಂಭವಿಸಿದೆ. ಅಲ್ಲಿನ ಶವಾಗಾರಗಳೆಲ್ಲವೂ ಭರ್ತಿಯಾಗಿದ್ದು, ಒಮಿಕ್ರಾನ್ನಿಂದಾಗಿ ಇತ್ತೀಚೆಗೆ ಅಸುನೀಗುತ್ತಿರುವವರನ್ನು ವೈದ್ಯಕೀಯ ಸಿಬ್ಬಂದಿಯು ಹಡಗುಗಳಲ್ಲಿ ಸರಕು ಸಾಗಣೆಗಾಗಿ ಬಳಸಲಾಗುವ ಕಂಟೈನರ್ಗಳಲ್ಲಿ ಇರಿಸಲಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸುರಕ್ಷಾ ಕವಚಗಳನ್ನು (ಪಿಪಿಇ ಕಿಟ್) ಧರಿಸಿರುವ ವೈದ್ಯಕೀಯ ಸಿಬ್ಬಂದಿಯು, ಶವಗಳನ್ನು ಕೊಂಡೊಯ್ದು ಕಂಟೈನರ್ಗಳಲ್ಲಿ ಇರಿಸಿ ಬರುತ್ತಿದ್ದಾರೆ. ಫುಶಾನ್ ಶವಾಗಾರದ ಮುಂದೆಯೂ ಒಂದು ಕಂಟೈನರ್ ಇರಿಸಲಾಗಿದ್ದು ಅಲ್ಲಿ ಶವಗಳನ್ನು ಕಪ್ಪು ಟಾರ್ಪಾಲಿನ್ನಲ್ಲಿ ಸುತ್ತಿ ಹೋಗಿ ಸಾಲಾಗಿ ಇಟ್ಟುಬರಲಾಗುತ್ತಿದೆ. ಒಮಿಕ್ರಾನ್ನಿಂದ ಅಸುನೀಗಿರುವವರಲ್ಲಿ ಲಸಿಕೆ ಪಡೆಯದ ವಯೋವೃದ್ಧರೇ ಸೇರಿದ್ದಾರೆ ಎಂದು ಹೇಳಲಾಗಿದೆ.
ಹಾಂಕಾಂಗ್ನಲ್ಲೀಗ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಸಾವಿನ ಸಂಖ್ಯೆಯೂ ಅಧಿಕವಾಗಿದ್ದು, ಶವಸಂಸ್ಕಾರಕ್ಕೆ ಬೇಕಾದ ಕಫಿನ್ಗಳ ಕೊರತೆ ಕಂಡುಬಂದಿದೆ ಎಂದು ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿಕೊಂಡುವ ಸಂಸ್ಥೆಯೊಂದು ಹೇಳಿದೆ.
ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star) ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ
ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು! Twitter Facebook LinkedIn WhatsApp ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್
ಅಕ್ಟೋಬರ್ 17 ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ Google Pixel 9 Pro Twitter Facebook LinkedIn WhatsApp Google Pixel 9 Pro: ಗೂಗಲ್ ಪಿಕ್ಸೆಲ್ 9 ಪ್ರೊ ಅಕ್ಟೋಬರ್ 17 ರಂದು