ಎಸ್ಡಿಪಿಐ ಯಿಂದ ಅಡ್ಡೂರಿನಲ್ಲಿ ಬ್ಲಾಕ್ ಸಮಾಗಮ - 2023
Twitter
Facebook
LinkedIn
WhatsApp
ಗುರುಪುರ : 12-09-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ಬ್ಲಾಕ್ ಸಮಿತಿಯಿಂದ ಬ್ಲಾಕ್ ಸಮಾಗಮ – 2023 ಕಾರ್ಯಕ್ರಮವು ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಕೈಕಂಬ ರವರ ಅಧ್ಯಕ್ಷತೆಯಲ್ಲಿ ಅಡ್ಡೂರಿನ ಪಕ್ಷದ ಕಛೇರಿಯಲ್ಲಿ ನಡೆಯಿತು.
ಜಿಲ್ಲಾ ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಯವರು ಮಾತಾಡಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಗುರುತಿಸಿ ಅದನ್ನು ಪರಿಹರಿಸುವಂತಹ ಕೆಲಸವನ್ನು ಮಾಡಬೇಕು ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟಿಸುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಸಮಿತಿ ಸದಸ್ಯ ಶಮೀಮ್ ಹಳೆಯಂಗಡಿ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ ಹಾಗೂ ಬ್ಲಾಕ್, ಗ್ರಾಮ, ಬೂತ್ ಮಟ್ಟದ ನಾಯಕರು ಉಪಸ್ಥಿತರಿದ್ದರು.
ಬ್ಲಾಕ್ ಅಧ್ಯಕ್ಷ ಅಶ್ರಫ್ ಕೈಕಂಬ ಸ್ವಾಗತಿಸಿ,ಬ್ಲಾಕ್ ಕಾರ್ಯದರ್ಶಿ ಸಾಹಿಕ್ ಅಡ್ಡೂರು ಧನ್ಯವಾದಗ್ಯೆದರು.