ಉಡುಪಿ: ವಿದ್ಯಾರ್ಥಿಯ ಮೊಬೈಲ್‌ಗೆ ಲಿಂಕ್ ಕಳಿಸಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ
Twitter
Facebook
LinkedIn
WhatsApp

ಉಡುಪಿ, ಫೆ 20 : ವಿದ್ಯಾರ್ಥಿಯ ಮೊಬೈಲ್‌ಗೆ ಲಿಂಕ್ ಕಳಿಸಿ ಖಾತೆಯಿಂದ ಒಟ್ಟು 80,602ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ರೂಪಶ್ರೀ ಎಂ.ಸಿ ಎಂಬ ವಿದ್ಯಾರ್ಥಿನಿ ವಿಧ್ಯಾಬ್ಯಾಸಕ್ಕಾಗಿ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದು, ಆರ್ಡರ್ ಮಾಡಿ ಒಂದು ವಾರ ಕಳೆದರೂ ಪುಸ್ತಕಗಳು ಬಾರದಿದ್ದಾಗ ಗೂಗಲ್ ನಲ್ಲಿ ಕೋರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿ ಕಂಡು ಬಂದ ಮೊಬೈಲ್ ನಂಬ್ರ ಕ್ಕೆ ಕರೆ ಮಾಡಿದ್ದಾರೆ.
ಆಗ ವ್ಯಕ್ತಿಯೊಬ್ಬ ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿ, ವಿದ್ಯಾರ್ಥಿನಿಯ ಮೊಬೈಲ್ ಗೆ ಲಿಂಕ್ ಒಂದನ್ನು ಕಳುಹಿಸಿ, ವಿವರ ಪಡೆದು, ಅದೇ ದಿನ ಕ್ರಮವಾಗಿ 19 ಟ್ರಾನ್ಸೆಕ್ಷನ್ ಮುಖೇನ ಆಕೆಯ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಕುಂದಾಪುರ ಖಾತೆಯ, ಖಾತೆಯಿಂದ ಒಟ್ಟು ರೂಪಾಯಿ 80,602 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.