ಈಡನ್ ಗಾರ್ಡನ್ಸ್‌ನಲ್ಲಿ 2ನೇ ಏಕದಿನ ಪಂದ್ಯ – ಸರಣಿ ಗೆಲ್ಲುವ ತವಕದಲ್ಲಿ ಭಾರತ, ಪುಟಿದೇಳುವ ವಿಶ್ವಾಸದಲ್ಲಿ ಲಂಕಾ
ಕೋಲ್ಕತ್ತಾ: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಎರಡನೇ ಏಕದಿನ ಪಂದ್ಯ (2nd ODI) ಇಂದು ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ನಡೆಯಲಿದೆ.
ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಪಡಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ. ಇತ್ತ ಮೊದಲ ಪಂದ್ಯ ಸೋತ ಶ್ರೀಲಂಕಾ ಎರಡನೇ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಿಕೊಂಡು ಭಾರತಕ್ಕೆ ಪೈಪೋಟಿ ನೀಡುವ ಇರಾದೆಯಲ್ಲಿದೆ.
ಮೊದಲ ಪಂದ್ಯದಲ್ಲಿ ರನ್ ಮಳೆ ಸುರಿಸಿದ್ದ ಬ್ಯಾಟ್ಸ್‌ಮ್ಯಾನ್‌ಗಳು ಈಡನ್ ಗಾರ್ಡನ್ಸ್‌ನಲ್ಲೂ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಬ್ಯಾಟ್ಸ್‌ಮ್ಯಾನ್‌ಗಳಿಗೆ ಸ್ನೇಹಿ ಪಿಚ್ ಆಗಿರುವ ಈಡನ್ ಗಾರ್ಡನ್ಸ್ ಸ್ಪಿನ್ನರ್‌ಗಳಿಗೂ ಹೆಚ್ಚು ನೆರವಾಗಲಿದೆ.
ಭಾರತ ತಂಡ ಬಹುತೇಕ ಮೊದಲ ಪಂದ್ಯವಾಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಶ್ರೀಲಂಕಾ ಕೆಲ ಬದಲಾವಣೆಯೊಂದಿಗೆ ಆಡಬಹುದು. ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿರುವ ಶ್ರೀಲಂಕಾ ಟಫ್ ಫೈಟ್ ನೀಡಲು ನಿರ್ಧರಿಸಿದೆ. 2014ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಈಡನ್ ಗಾರ್ಡನ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 404 ರನ್ ಸಿಡಿಸಿದ್ದು, ಹೆಚ್ಚಿನ ಸ್ಕೋರ್ ರೆಕಾರ್ಡ್ ಆಗಿದೆ. ಇಂದು ಕೂಡ ಬಿಗ್ ಫೈಟ್ ಕಂಡುಬರಲಿದ್ದು ಅಭಿಮಾನಿಗಳು ಕಾಯುತ್ತಿದ್ದಾರೆ. ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.