'ಆರ್ ಆರ್ ಆರ್' ಸಿನಿಮಾದ ವಿಲನ್ ಸ್ಟೀವನ್ ಸನ್ ನಿಧನ!
‘ಆರ್ಆರ್ಆರ್’ ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ಐರಿಷ್ ನಟ ರೇ ಸ್ಟೀವನ್ಸನ್ (Ray Stevenson) ಭಾನುವಾರ (ಮೇ 21) ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ಮೇ 15ರಂದು ಅವರು 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವವರಿದ್ದರು. ಅವರ ಸಾವಿಗೆ ಕಾರಣ ಏನು ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ. ರೇ ಸ್ಟೀವನ್ಸನ್ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ‘ಆರ್ಆರ್ಆರ್’ (RRR Movie) ಚಿತ್ರತಂಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಂಬನಿ ಮಿಡಿದಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ‘ಆರ್ಆರ್ಆರ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತು. ಭಾರತೀಯರು ಹಾಗೂ ಬ್ರಿಟಿಷರ ನಡುವಿನ ಸಂಘರ್ಷವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಯಶಸ್ಸು ಕಾಣಲು ರೇ ಸ್ಟೀವನ್ಸನ್ ಅವರ ಕೊಡುಗೆಯೂ ಇದೆ. ಖಡಕ್ ವಿಲನ್ ಆಗಿ ಅವರು ಎಲ್ಲರ ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಇನ್ನೂ ಶ್ರಮಿಸಬೇಕಿದ್ದ ಅವರು ನಿಧನ ಹೊಂದಿದ್ದು ಅನೇಕರಿಗೆ ಬೇಸರ ಮೂಡಿಸಿದೆ.
ರೇ ಸ್ಟೀವನ್ಸನ್ ಹುಟ್ಟಿದ್ದು 1964 ಮೇ 25. 8ನೇ ವಯಸ್ಸಿಗೆ ಅವರು ಇಂಗ್ಲೆಂಡ್ಗೆ ಶಿಫ್ಟ್ ಆದರು. ಸಣ್ಣ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ತೊಡಗಿಕೊಂಡರು. 90ನೇ ದಶಕದಲ್ಲಿ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. 1998ರಲ್ಲಿ ರಿಲೀಸ್ ಆದ ‘ದಿ ಥಿಯರಿ ಆಫ್ ಫ್ಲೈಟ್’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಿಂದ ರೇ ಸ್ಟೀವನ್ಸನ್ ಅವರ ಯಶಸ್ಸು ಹೆಚ್ಚಿತು. ಅವರ ಪಾತ್ರ ಅನೇಕರಿಗೆ ಇಷ್ಟ ಆಯಿತು. ‘ಪನಿಶರ್: ವಾರ್ ಜೋನ್’ ಮೊದಲಾದ ಚಿತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.
What shocking news for all of us on the team! ?
— RRR Movie (@RRRMovie) May 22, 2023
Rest in peace, Ray Stevenson.
You will stay in our hearts forever, SIR SCOTT. pic.twitter.com/YRlB6iYLFi