ವಿಜಯವಾಡ: ಆಂಧ್ರಪ್ರದೇಶದ(Andhra Pradesh) ವಿಜಯವಾಡ ಜಿಲ್ಲೆಯ ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ (Chlorine Gas Leak) ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಇವರೆಲ್ಲರೂ 8 ರಿಂದ 14 ವರ್ಷ ವಯಸ್ಸಿನವರು ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕರು ತಿಳಿಸಿದ್ದಾರೆ. ವಿಜಯವಾಡ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಬುಧವಾರ ಮಕ್ಕಳು ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೊಳದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ಉಪಕರಣಗಳು ಮತ್ತು ಹಳೆಯ ಗ್ಯಾಸ್ ಸಿಲಿಂಡರ್‌ನಿಂದಾಗಿ ಅನಿಲ ಸೋರಿಕೆ ಸಂಭವಿಸಿದೆ. ನಂತರ ಅದನ್ನು ಸರಿಪಡಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಈಗ ಸ್ಥಿರವಾಗಿದ್ದಾರೆ ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist