ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!
ಸನ್ರೈಸರ್ಸ್ ಹೈದರಾಬಾದ್ ತಂಡದ 23 ವರ್ಷದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಮಡಿದ್ದಾರೆ. ಈ ಮೂಲಕ ಐಪಿಎಲ್ ದಿಗ್ಗಜ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ 8 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
ಭಾನುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿತು.ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪಂಜಾಬ್ ಕಿಂಗ್ಸ್ ಪ್ರಭಾಸಿಮ್ರಾನ್ ಸಿಂಗ್ ಅವರ 45 ಎಸೆತಗಳಲ್ಲಿ 71 ಮತ್ತು ನಾಯಕ ಜಿತೇಶ್ ಶರ್ಮ ಅವರ ಅಂತಿಮ ಓವರ್ನ ಅಮೋಘ ಆಟದಿಂದಾಗಿ 5 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತು. ಹೈದರಾಬಾದ್ ಮೊದಲ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರ ವಿಕೆಟ್ ಕಳೆದುಕೊಂಡ ನಂತರ ಸಂಪೂರ್ಣ ನಿಯಂತ್ರಣವನ್ನು ತೋರಿ ಐದು ಎಸೆತಗಳು ಬಾಕಿ ಇರುವಂತೆಯೇ ದೊಡ್ಡ ಗುರಿಯನ್ನು ಬೆನ್ನಟ್ಟಿತು. ಅಭಿಷೇಕ್ ಶರ್ಮ ಅವರ ಸ್ಪೋಟಕ ಅರ್ಧಶತಕ, ಕ್ಲಾಸೆನ್ ಅವರ ಅಬ್ಬರದ 42, ರಾಹುಲ್ ತ್ರಿಪಾಠಿ 33 ಮತ್ತು ನಿತೀಶ್ ರೆಡ್ಡಿ ಅವರ 37 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅಭಿಷೇಕ್ ಶರ್ಮ28 ಎಸೆತಗಳಲ್ಲಿ 66 ರನ್ ಚಚ್ಚಿದರು.5 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.
ಪಂಜಾಬ್ ತಂಡದ ವೇಗದ ಬೌಲರ್ ರಿಷಿ ಧವನ್ ಎದುರು ಇನಿಂಗ್ಸ್ನ ಆರನೇ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕೊಹ್ಲಿ ಹೆಸರಲ್ಲಿದ್ದ ದಾಖಲೆಯನ್ನು ಅಭಿಷೇಕ್ ಅಳಿಸಿಹಾಕಿದರು. 2016ರ ಐಪಿಎಲ್ ಟೂರ್ನಿಯಲ್ಲಿ 950ಕ್ಕೂ ಹೆಚ್ಚು ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಅಷ್ಟೇ ಅಲ್ಲದೆ ದಾಖಲೆಯ 38 ಸಿಕ್ಸರ್ಗಳನ್ನು ಸಿಡಿಸಿದ್ದರು. ಐಪಿಎಲ್ 2024 ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಡಿದ 13 ಪಂದ್ಯಗಳಲ್ಲಿ ಒಟ್ಟಾರೆ 41 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ (41*) ಈಗ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು ಒಟ್ಟು 37 ಸಿಕ್ಸರ್ಗಳನ್ನು ಸಿಡಿಸಿ ತಮ್ಮದೇ ದಾಖಲೆ ಅಳಿಸಿಹಾಕುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ.
17ನೇ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್ಸ್
01. ಅಭಿಷೇಕ್ ಶರ್ಮಾ (ಸನ್ರೈಸರ್ಸ್ ಹೈದರಾಬಾದ್): ಪಂದ್ಯ 13, ಸಿಕ್ಸರ್ 41
02. ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಪಂದ್ಯ 14, ಸಿಕ್ಸರ್ 37
03. ನಿಕೋಲಸ್ ಪೂರನ್ (ಲಖನೌ ಸೂಪರ್ ಜಯಂಟ್ಸ್): ಪಂದ್ಯ 14, ಸಿಕ್ಸರ್ 36
04. ಹೆನ್ರಿಸಚ್ ಕ್ಲಾಸೆನ್ (ಸನ್ರೈಸರ್ಸ್ ಹೈದರಾಬಾದ್): ಪಂದ್ಯ 13, ಸಿಕ್ಸರ್ 33
05. ಸುನೀಲ್ ನರೇನ್ (ಕೋಲ್ಕತಾ ನೈಟ್ ರೈಡರ್ಸ್): ಪಂದ್ಯ 13, ಸಿಕ್ಸರ್ 32