ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!
ಕಲಬುರಗಿ: ಕಲ್ಲಿನಿಂದ ಜಜ್ಜಿ, ಬಳಿಕ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ(Aland) ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ರವಿಕುಮಾರ್(45) ಕೊಲೆಯಾದ ವ್ಯಕ್ತಿ. ಆರೋಪಿ ವಿಜಯ್ ಕುಮಾರ್ ಪತ್ನಿ ಜೊತೆ ಮೃತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ. ಈ ಹಿನ್ನಲೆ ಮೊದಲು ರವಿಕುಮಾರ್ನನ್ನು ಕೊಂದು ಬಳಿಕ ತನ್ನ ಪತ್ನಿ ನೀಲಮ್ಮಳ ಕೊಲೆಗೂ ಯತ್ನಿಸಿದ್ದಾನೆ.
ಘಟನೆ ವಿವರ
ಪತ್ನಿ ನೀಲಮ್ಮ ಜೊತೆ ರವಿಕುಮಾರ್ ಅನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದ ವಿಜಯ್ ಕುಮಾರ್, ತನ್ನದೇ ಕಾರಿನಲ್ಲಿ ಹೆಂಡತಿ ಮತ್ತು ರವಿಕುಮಾರ್ನನ್ನು ಕರೆದೊಯ್ದಿದ್ದ. ಕಾರಿನಲ್ಲಿ ರವಿಕುಮಾರ್ ಜೊತೆ ಗಲಾಟೆ ತೆಗೆದು ಬಳಿಕ ಕೊಲೆ ಮಾಡಿದ್ದಾನೆ. ಇನ್ನು ಕೊಲೆ ಆರೋಪಿ ವಿಜಯಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನನ್ನ ಪ್ರೇಯಸಿಗೆ ಮೆಸೇಜ್ ಮಾಡ್ತೀಯಾ ಎಂದು ಬೆರಳು ಕಟ್!
ಬೆಂಗಳೂರು: ತನ್ನ ಪ್ರಿಯತಮೆ (Lover) ಜೊತೆ ಗೆಳೆತನ (Friendship) ಬೆಳೆಸಿದ್ದಕ್ಕೆ ಯುವಕನ ಮೇಲೆ ಮಾಜಿ ಪ್ರಿಯಕರ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ (Assault Case) ಯುವಕನೊಬ್ಬನ ಬೆರಳುಗಳನ್ನೇ ಕತ್ತರಿಸಿ (Finger cut) ಹಾಕಿದ್ದಾನೆ. ಬಸವನಗುಡಿ ಬುಲ್ ಟೆಂಬಲ್ ರಸ್ತೆಯಲ್ಲಿರುವ ಪುಲ್ವಾಡಿ ಫ್ಲವರ್ ಶಾಪ್ನಲ್ಲಿ ಏಪ್ರಿಲ್ 28ರಂದು ರಾತ್ರಿ 8.30ಕ್ಕೆ ಈ ಘಟನೆ (Crime news) ನಡೆದಿದೆ.
ಫ್ಲವರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಶಶಾಂಕ್ ಹಾಗೂ ಹಾಗೂ ಚಂದನ್ ಎಂಬವರು ಲಾಂಗ್ ಬೀಸಿದ್ದಾರೆ. ಲಾಂಗು- ಮಚ್ಚಿನಿಂದ ಹಲ್ಲೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರೂ ಹರ್ಷಿತ್ನ ಬಲಗೈನ ಹೆಬ್ಬೆರಳು ಕಟ್ ಆಗಿದೆ. ಎಡಗೈನ ಮುಂಗೈಯನ್ನು ಎರಡು ತುಂಡು ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ ಹೀಗಿದೆ: ಬಿಕಾಂ ಮುಗಿಸಿದ್ದ ಹರ್ಷಿತ್ ತಂದೆಯ ಫ್ಲವರ್ ಡೆಕೊರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿ ಒಂದು ಡಯೋಗ್ನಾಸ್ಟಿಕ್ ಸೆಂಟರ್ ಇದೆ. ಡಯೋಗ್ನಾಸ್ಟಿಕ್ ಸೆಂಟರ್ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಚಿಲ್ಲರೆ ಕೇಳಲು ಹೋಗಿ ಬಂದಾಗ ಯುವತಿ ಮತ್ತು ಹರ್ಷಿತ್ ಮಧ್ಯೆ ಗೆಳೆತನ ಬೆಳೆದಿದೆ. ಅದೇ ಗೆಳೆತನ ನಂಬರ್ ಎಕ್ಸ್ಚೇಂಜ್ ಆಗಿ ಚಾಟ್ ಮಾಡುವ ಹಂತಕ್ಕೆ ಬಂದಿತ್ತು.
ಆದರೆ ಆ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ಆರೋಪಿ ಶಶಾಂಕ್ಗೆ, ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಅನ್ನುವ ಅನುಮಾನ ಮೂಡಿತ್ತು. ಯುವತಿಯ ಮೊಬೈಲ್ ಪರಿಶೀಲನೆ ವೇಳೆ ಚಾಟ್ ಮಾಡಿರುವುದು ಕಂಡಿದೆ. ಇದರಿಂದ ಶಶಾಂಕ್ ಕೋಪದಿಂದ ಕುದ್ದು ಹೋಗಿದ್ದ. ಕೇವಲ ಸ್ನೇಹಿತರ ನಡುವಿನ ರೀತಿಯ ಮೆಸೇಜ್ಗಳಿದ್ದರೂ ಕೋಪದಿಂದ ಕುರುಡಾಗಿದ್ದ ಶಶಾಂಕ್ ಅದನ್ನು ಸಹಿಸಿಕೊಳ್ಳಲು ಸಿದ್ಧವಿರಲಿಲ್ಲ. ಹರ್ಷಿತ್ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದ.
ಏಪ್ರಿಲ್ 28ರಂದು ಸ್ನೇಹಿತ ಚಂದನ್ನನ್ನು ಕರೆಸಿಕೊಂಡಿದ್ದ. ಇಬ್ಬರೂ ಬಾರ್ನಲ್ಲಿ ಕುಡಿದು ಲಾಂಗ್ ಜೊತೆಗೆ ಹರ್ಷಿತ್ ಅಂಗಡಿಗೆ ಬಂದಿದ್ದಾರೆ. ಬಂದವರೇ ಹರ್ಷಿತ್ ಮೇಲೆ ಯದ್ವಾತದ್ವಾ ಲಾಂಗ್ ಬೀಸಿ ಪರಾರಿ ಆಗಿದ್ದಾರೆ. ಕೈಯಿಂದ ರಕ್ತ ಸೋರುತ್ತಿದ್ದರೂ ಹರ್ಷಿತ್ ಫುಟ್ಪಾತ್ ಮೇಲೆ ಬಂದು ನಿಂತಿದ್ದಾನೆ. ಕೆಲವೇ ಹೊತ್ತಲ್ಲಿ ಫುಟ್ಪಾತ್ ರಕ್ತದ ಕೋಡಿಯಾಗಿದೆ. ತುಂಡಾದ ಬೆರಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹರ್ಷಿತ್ ಆಸ್ಪತ್ರೆಗೆ ಹೋಗಿದ್ದಾನೆ.
ಹರ್ಷಿತ್ನನ್ನು ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳನ್ನು ಶಂಕರಪುರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿ ವಿಚಾರಿಸಿಕೊಳ್ಳುತ್ತಿದ್ದಾರೆ.