ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ
ಲಕ್ನೋ: ವೃದ್ಧನೊಬ್ಬ ತನ್ನ 15 ವರ್ಷದ ಮೊಮ್ಮಗಳ (Grand Daughter) ಮೇಲೆ ಅತ್ಯಾಚಾರವೆಸಗಿ (Rape), ಪ್ರಕರಣದ ಬಗ್ಗೆ ಯಾರಿಗೂ ತಿಳಿಸದಂತೆ 10 ರೂ. ನೀಡಿದ ಘಟನೆ ಉತ್ತರಪ್ರದೇಶದ (Uttar Pradesh) ಗೋರಖ್ಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ 60 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ಆಡು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಬಾಲಕಿಯ ತಾಯಿ (Mother) ಜೊತೆಗೆ ಆಕೆಯ ಅಜ್ಜ, ಬಾಲಕಿ ಇಬ್ಬರು ಹೊಲಕ್ಕೆ ಬಂದಿದ್ದರು. ಈ ವೇಳೆ ಬಾಲಕಿಯ (Girl) ಅಜ್ಜ, ಸೊಸೆಯನ್ನು ಮನೆಗೆ ಕಳುಹಿಸಿದ್ದಾನೆ. ಅದಾದ ಬಳಿಕ ಕೊಡಲಿಯನ್ನು ಕೊಡುವಂತೆ ಬಾಲಕಿ ಬಳಿ ಹೇಳಿದ್ದಾನೆ. ಈ ವೇಳೆ ಯಾರೂ ಇಲ್ಲದ್ದನ್ನು ಗಮನಿಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಕೃತ್ಯದ ಬಗ್ಗೆ ಯಾರಿಗೂ ತಿಳಿಸದಂತೆ ಆಕೆಗೆ 10 ರೂ. ನೀಡಿದ್ದಾನೆ.
ಈ ವೇಳೆ ನೀರು ತರಲು ಗದ್ದೆಯ ಮೂಲಕ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಘಟನೆಯನ್ನು ನೋಡಿದ್ದಾನೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಸ್ಥಳೀಯರನ್ನು ಕರೆದಿದ್ದು, ವೃದ್ಧನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುಲ್ರಿಹಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.