ವಿವಾಹ ವಾರ್ಷಿಕೋತ್ಸವದ ದಿನ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುಭಕೋರುವ ಮೂಲಕ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಅದರಲ್ಲೂ ಧನಶ್ರೀ ”ನನ್ನ ಸ್ಪಿನ್ನಿಂಗ್ ಸ್ಟಾರ್ ಜೊತೆ 730 ದಿನಗಳು ಆಗಿವೆ” ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
2020 ಡಿಸೆಂಬರ್ 22 ರಂದು ಈ ಜೋಡಿಯ ವಿವಾಹ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವರ ಮದುವೆಯಲ್ಲಿ ಟೀಮ್ ಇಂಡಿಯಾದ ಅನೇಕ ಸ್ಟಾರ್ ಆಟಗಾರರು ಭಾಗಿಯಾಗಿದ್ದರು.
ಈ ಜೋಡಿ ತಮ್ಮ ಮದುವೆಯ ಬಳಿಕ ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಐಪಿಎಲ್ ಪಂದ್ಯದಲ್ಲೂ ಧನಶ್ರೀ ತನ್ನ ಪತಿಗೆ ಹುರಿದುಂಬಿಸುತ್ತಿದ್ದರು.
ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದಾರೆ. ಅವರು ತಮ್ಮ ನೃತ್ಯದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈನಲ್ಲಿ ತಮ್ಮದೇ ಆದ ನೃತ್ಯ ಸಂಸ್ಥೆಯನ್ನೂ ಹೊಂದಿದ್ದಾರೆ.
ಇತ್ತೀಚೆಗಷ್ಟೆ ಚಹಲ್-ಧನಶ್ರೀ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡಿದ್ದವು. ಬಳಿಕ ಚಹಲ್ ಪತ್ನಿ ತಮ್ಮ ಇನ್ಸ್ಟಾಗ್ರಾಂ ಮೂಲಕ ನಮ್ಮ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist