ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಸತೀಶ್ ಕುಂಪಲ ಆಯ್ಕೆ..
ಬಂಟ್ವಾಳ: ದ.ಕ.ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿ ಬಿಲ್ಲವ ಸಮುದಾಯದ ಯುವ ನಾಯಕ ಸತೀಶ್ ಕುಂಪಲ ಅವರನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆ ಅವಧಿ ಮುಗಿದ ಜಿಲ್ಲಾವಾರು ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಈ ಬಾರಿ ಮತ್ತೆ ಜಿಲ್ಲೆಯ ನಾಯಕ ಸ್ಥಾನವನ್ನು ಬಿಲ್ಲವ ಸಮುದಾಯಕ್ಕೆ ನೀಡಿದ ರಾಜ್ಯ ಬಿಜೆಪಿ, ಬಿಲ್ಲವ ಸಮುದಾಯದ ಮತದ ಮೇಲೆ ಲೆಕ್ಕಾಚಾರ ಮಾಡಿದೆ ಎಂಬುದು ಕಂಡು ಬಂದಿದೆ.
ಪ್ರಸ್ತುತ ಮೂಡಬಿದಿರೆಯ ಸುದರ್ಶನ ಮೂಡಬಿದಿರೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಅಧ್ಯಕ್ಷರ ಬದಲಾವಣೆ ನಡೆದಿದೆ.
ಜಿಲ್ಲೆಯ ಪದಾಧಿಕಾರಿಗಳ ಆಯ್ಕೆಯಾದ ಕೂಡಲೇ ಮಂಡಲಗಳ ಪದಾಧಿಕಾರಿಗಳ ಆಯ್ಕೆ ಶೀಘ್ರವಾಗಿ ನಡೆಯಲಿದೆ ಎಂದು ಹೇಳಲಾಗಿದೆ.
ಸತೀಶ್ ಕುಂಪಲ ಅವರು ಕಳೆದ ಬಾರಿ ಮಂಗಳೂರು ಕ್ಷೇತ್ರದಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿರುದ್ದ ಸ್ಪರ್ಧಿಸಿ ಪರಾಜಯಗೊಂಡಿದ್ದರು.
ಈ ಹಿಂದೆ ಜಿಲ್ಲಾ ಪಂಚಾಯತ ನ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಆಡಳಿತಾತ್ಮಕ ವಿಚಾರದಲ್ಲಿ ಅನುಭವಿಯಾಗಿದ್ದಾರೆ.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣ
ವಿಟ್ಲ: ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾಲಾವಧಿ ಜಾತ್ರೋತ್ಸವದ ಧ್ವಜಾರೋಹಣ ಭಾನುವಾರ ಸಕಲ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಜ.14 ರಿಂದ ಆರಂಭಗೊಂಡ ವಿಟ್ಲ ಜಾತ್ರೋತ್ಸವ ಜ. 22 ರ ತನಕ 9 ದಿನಗಳ ಅವಧಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿಗಳ ಮೂಲಕ ವಿವಿಧ ವೈದಿಕ ವಿಧಿ ವಿಧಾನಗಳು ನಡೆದ ಬಳಿಕ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಅನುವಂಶಿಕ ಆಡಳಿತ ಪ್ರತಿನಿಧಿ ವಿಟ್ಲ ಅರಮನೆಯ ಬಂಗಾರು ಅರಸರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಿತು. ದೇಗುಲದ ಅರ್ಚಕ ವೃಂದ, ಸೀಮೆಯ ಗುರಿಕ್ಕಾರರು, ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಊರ, ಪರವೂರ ಗಣ್ಯರು, ನೂರಾರು ಭಕ್ತರು ಭಾಗವಹಿಸಿದ್ದರು.