ಹೃದಯಘಾತಕ್ಕೆ ಯುವ ಕ್ರಿಕೆಟಿಗ ಬಲಿ ; ಪಂದ್ಯದ ಬಳಿಕ ಹೃದಯಘಾತ..!
ಸಂತಾಪ ಸೂಚಿಸಿದ ಆರೋಗ್ಯ ಸಚಿವರು ಯುವ ಕ್ರಿಕೆಟಿಗನ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿರುವ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ‘ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗನ ನಿಧನದ ಬಗ್ಗೆ ಕೇಳಿ ದುಃಖವಾಗುತ್ತಿದೆ. ವೇಗದ ಬೌಲರ್ ಹೊಯ್ಸಳ ಏಜಿಸ್ ದಕ್ಷಿಣ ವಲಯ ಪಂದ್ಯಾವಳಿಯ ವೇಳೆ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ನನ್ನ ಸಂತಾಪಗಳು. ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಕರು ಹೃದಯ ಸ್ತಂಭನಕ್ಕೆ ಬಲಿಯಾಗುತ್ತಿರುವ ಇತ್ತೀಚಿನ ಘಟನೆಗಳು ಆರೋಗ್ಯ ಜಾಗೃತಿಯ ಮಹತ್ವವನ್ನು ಒತ್ತಿಹೇಳುತ್ತವೆ. ಹೀಗಾಗಿ ಹೃದಯದ ಆರೋಗ್ಯದ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.
Saddened to hear about the sudden demise of Karnataka's emerging cricketer, fast bowler K. Hoysala, during the Aegis South Zone Tournament.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 23, 2024
My heartfelt condolences go out to his family and friends in this hour of grief.
Recent incidents of youth succumbing to cardiac arrest…
ಕ್ರಿಕೆಟಿಗ ಅಭಿಮನ್ಯು ಮಿಥುನ್ ಸಂತಾಪ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಅಭಿಮನ್ಯು ಮಿಥುನ್, ಹೊಯ್ಸಳ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ‘ನಾನು ಈ ರೀತಿ ಬರೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇಂದು ನಾವು ಒಬ್ಬ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಪ್ರತಿಭಾವಂತ ಕ್ರಿಕೆಟಿಗ, ಉತ್ತಮ ಕಾಳಜಿಯುಳ್ಳ ಸ್ನೇಹಿತ. ಬಹಳ ಬೇಗ ಹೋಗಿಬಿಟ್ಟ, ಎಂದಿಗೂ ನಿನ್ನ ಮರೆಯಲಾಗುವುದಿಲ್ಲ ಹೊಯ್ಸಳ ಎಂದಿದ್ದಾರೆ.