WPL 2024: 2 ರನ್‌ಗಳ ರೋಚಕ ಗೆಲುವು ಸಾಧಿಸಿದ RCB
ಬೆಂಗಳೂರು: ಶೋಭನಾ ಆಶಾ ಮಾರಕ ದಾಳಿಯಿಂದಾಗಿ 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಗೆಲುವಿನ ಆರಂಭ ಪಡೆದಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 2 ರನ್ ರೋಚಕ ಗೆಲುವು ಲಭಿಸಿತು.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ರಿಚಾ ಘೋಷ್ ಹಾಗೂ ಶಬ್ಬಿನೇನಿ ಮೇಘನಾ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 157 ರನ್ ಕಲೆಹಾಕಿತು. ನಾಯಕಿ ಸ್ಮೃತಿ ಮಂಧನಾ(13), ಸೋಫಿ ಡಿವೈನ್(01), ಎಲೈಸ್ ಪೆರ್ರಿ(08) ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಆದರೆ ಮೇಘನಾ 53 ಹಾಗೂ ರಿಚಾ 37 ಎಸೆತಗಳಲ್ಲಿ 62 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ ಎಸೆತದಲ್ಲಿ 5 ರನ್ ಬೇಕಿದ್ದಾಗ ಆರ್‌ಸಿಬಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. ಗ್ರೇಸ್ ಹ್ಯಾರಿಸ್ 38, ಶ್ವೇತಾ ಶೆರಾವತ್ 31 ರನ್ ಗಳಿಸಿದರು. ಶೋಭಾ 22 ರನ್‌ಗೆ 5 ವಿಕೆಟ್ ಕಿತ್ತರು.
ಟರ್ನಿಂಗ್ ಪಾಯಿಂಟ್: ಒಂದು ಹಂತದವರೆಗೂ ಪಂದ್ಯ ಯುಪಿ ವಾರಿಯರ್ಸ್ ಹಿಡಿತದಲ್ಲಿತ್ತು. ಆದರೆ ಸ್ಟ್ರಾಟರ್ಜಿಕ್ ಟೈಮ್ ಔಟ್ ಬಳಿಕ ಬೌಲಿಂಗ್ ಮಾಡಿದ ಶೋಭನಾ ಆಶಾ ಒಂದೇ ಓವರ್‌ನಲ್ಲಿ 3 ವಿಕೆಟ್ ಕಬಳಿಸಿ ಪಂದ್ಯ ಆರ್‌ಸಿಬಿ ಪರ ವಾಲುವಂತೆ ಮಾಡಿದರು. ಹೀಗಿದ್ದೂ ಪಂದ್ಯ ಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.