ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Women's Under-19 World Cup: ಭಾರತದ ತಾರೆ ಅರ್ಚನಾ ದೇವಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನು ಬದಲಾಯಿಸಿತು!

Twitter
Facebook
LinkedIn
WhatsApp
29 01 2023 archana devi catch 23312857

Women’s Under-19 World Cup: ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್​​ನಲ್ಲೂ ಅಮೋಘ ಪ್ರದರ್ಶನ ತೋರಿತು. ಅದರಲ್ಲೂ ಅರ್ಚನಾ ದೇವಿ ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನು ಬದಲಾಯಿಸಿತು ಎಂದರೆ ತಪ್ಪಗಲಾರದು. 

ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ 19 ವರ್ಷದೊಳಗಿನವರ ಟಿ20 ವಿಶ್ವಕಪ್‌ (Women’s Under-19 World Cup) ಅನ್ನು ಭಾರತ ಮಹಿಳಾ ತಂಡ ಗೆದ್ದು ಬೀಗಿದೆ. ಇಂಗ್ಲೆಂಡ್ ಎದುರು ನಡೆದ ಫೈನಲ್ ಕಾದಾಟದಲ್ಲಿ ಪ್ರಬಲ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ನೀಡಿದ 19 ವರ್ಷದೊಳಗಿನ ವನಿತೆಯರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಐಸಿಸಿಯಿಂದ ಮೊದಲ ಬಾರಿಗೆ ಆಯೋಜನೆಗೊಂಡ 19 ವರ್ಷದೊಳಗಿನವರ ವನಿತೆಯರ ವಿಶ್ವಕಪ್​ನಲ್ಲಿ ಭಾರತದ ವುಮೆನ್​ ಇನ್​ ಬ್ಲೂ ತಂಡ ಜಯ ಸಾಧಿಸಿದೆ.

ಶಫಾಲಿ ವರ್ಮಾ (Shafali Verma) ನಾಯಕತ್ವದ ಭಾರತ ಲೋ ಸ್ಕೋರ್ ಗೇಮ್​ನಲ್ಲಿ 7 ವಿಕೆಟ್‌ ಅಂತರದಿಂದ ಗೆಲುವು ಕಂಡಿತು. ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್​​ನಲ್ಲೂ ಅಮೋಘ ಪ್ರದರ್ಶನ ತೋರಿತು. ಅದರಲ್ಲೂ ಅರ್ಚನಾ ದೇವಿ (Archana Devi) ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನು ಬದಲಾಯಿಸಿತು ಎಂದರೆ ತಪ್ಪಗಲಾರದು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ಅಂಡರ್ 19 ತಂಡ ಮೊದಲ ಓವರ್​ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 50 ರನ್​ಗೂ ಮೊದಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 68 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ರಯಾನಾ ಮ್ಯಾಕ್ಡೊನಾಲ್ಡ್ ಗೇ 19 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಈ ಮುಖ್ಯ ವಿಕೆಟ್ ಕೀಳಲು ಸಹಕಾರಿ ಆಗಿದ್ದು ಅರ್ಚನಾ ಹಿಡಿದ ಅದ್ಭುತ ಕ್ಯಾಚ್. 12ನೇ ಓವರ್​ನ ಪರ್ಶವಿ ಚೋಪ್ರಾ ಬೌಲಿಂಗ್​ನಲ್ಲಿ ಅರ್ಚನಾ ಅವರು ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಮುಂದಿನ 25 ರನ್​ಗಳಲ್ಲಿ ಇಂಗ್ಲೆಂಡ್ ಆಲೌಟ್ ಆಯಿತು. ಭಾರತ ಪರ ಟಿಟಾಸ್ ಸಧು, ಅರ್ಚನಾ ದೇವಿ ಹಾಗೂ ಪರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ