ಪತಿ ಹೃದಯಾಘಾತಕ್ಕೆ ಬಲಿಯಾದ 24 ಗಂಟೆಯೊಳಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ..!
ನವದೆಹಲಿ ಫೆಬ್ರವರಿ 27: ನವಜೋಡಿಗಳ ಜೀವನ ದುರಂತದಲ್ಲಿ ಅಂತ್ಯವಾದ ಘಟನೆ ದೆಹಲಿಯಲ್ಲಿ ನಡೆದಿದೆ. ಪತಿ ಹೃದಯಾಘಾತದಿಂದ ನಿಧನರಾದ 24 ಗಂಟೆಯೊಳಗೆ ಪತ್ನಿ ಕೂಡ ಏಳನೇ ಮಹಡಿಯಿಂ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರನ್ನು ಗಾಜಿಯಾಬಾದ್‌ನ ಯುವ ದಂಪತಿ ಅಭಿಷೇಕ್ ಮತ್ತು ಅಂಜಲಿ ಎಂದು ಗುರುತಿಸಲಾಗಿದೆ. ಇಬ್ಬರು ನವೆಂಬರ್ 30ರಂದು ಹಸೆಮಣೆ ಏರಿದ್ದರು. ಸೋಮವಾರ, ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತು ಕೂಡಲೇ ಆತನ ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು, ಬಳಿಕ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆ ವೇಳೆಗಾಗಲೇ ಅಭಿಷೇಕ ಸಾವನಪ್ಪಿದ್ದರು, ಅಭಿಷೇಕ್ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದರು.
ಅವರ ಪಾರ್ಥಿವ ಶರೀರವು ಗಾಜಿಯಾಬಾದ್‌ನ ವೈಶಾಲಿಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪತಿಯ ಅಕಾಲಿಕ ಮರಣದ ಆಘಾತವನ್ನು ಸಹಿಸಲಾಗದೆ ಅಂಜಲಿ ತಮ್ಮ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಆಕೆ ಕೊನೆಯುಸಿರೆಳೆದಿದ್ದಾಳೆ.
25 ವರ್ಷದ ಯುವಕನ ದುರಂತ ಸಾವು ಹೃದಯಾಘಾತಕ್ಕೆ ಬಲಿಯಾಗುವ ಯುವ ವಯಸ್ಕರ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ಗಾರ್ಬಾ ಕಾರ್ಯಕ್ರಮಗಳಿಂದ ಹಿಡಿದು ಮದುವೆಯ ಮೆರವಣಿಗೆಗಳವರೆಗೆ ಜಿಮ್‌ಗಳವರೆಗೆ, ಯುವಕರು ಕುಸಿದು ಬೀಳುವ ಮತ್ತು ನಂತರ ಹೃದಯಾಘಾತದಿಂದ ಸಾಯುವ ಹಲವಾರು ಘಟನೆಗಳು ಕಳೆದ ಎರಡು ವರ್ಷಗಳಿಂದ ವರದಿಯಾಗಿವೆ.