ಮೂವರು ಶಾಸಕರೊಡನೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರಾ ನವಜೋತ್ ಸಿಂಗ್..?
ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಕಾಂಗ್ರೆಸ್ (Congress) ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಿಪಬ್ಲಿಕ್ ಟಿವಿ ವರದಿ ಪ್ರಕಾರ ಫೆಬ್ರವರಿ 22 ರ ನಂತರ ಸಿಧು ಜೊತೆಗೆ 3 ಕಾಂಗ್ರೆಸ್ ಶಾಸಕರು ಬಿಜೆಪಿ (BJP) ಸೇರಬಹುದು. ಸಿಧು ಅವರಿಗೆ ಯಾವುದೇ ಮಹತ್ವದ ಜವಾಬ್ದಾರಿಗಳನ್ನು ವಹಿಸದ ಕಾರಣ ಪಕ್ಷದ ಹೈಕಮಾಂಡ್ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಮರುಪ್ರವೇಶಕ್ಕಾಗಿ ನಾಯಕರನ್ನು ಸಮಾಧಾನಪಡಿಸಲು ಅವರು ಬಿಜೆಪಿಯ ಹಿರಿಯ ನಾಯಕತ್ವದಿಂದ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ. ಸಿಧು ಅವರು ಪಕ್ಷಕ್ಕೆ ಪ್ರವೇಶಿಸಿದಾಗಿನಿಂದಲೂ ಸ್ಥಳೀಯ ಕಾಂಗ್ರೆಸ್ ಘಟಕದೊಂದಿಗೆ ಗೊಂದಲದ ಸಂಬಂಧವನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯವೂ ಅತಂತ್ರವಾಗಿದೆ.
ಇತ್ತ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಮತ್ತು ಅವರ ಮಗ ನಕುಲ್ ನಾಥ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ಈ ಬಗ್ಗೆ ಕಮಲ್ ನಾಥ್ ಅವರಲ್ಲಿ ಕೇಳಿದಾಗ ಅಂಥದ್ದೇನಾದರೂ ಇದ್ದರೆ ಮೊದಲು ನಿಮಗೇ ತಿಳಿಸುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.
बुज़दिली की सज़ा सियासी मौत है … This is happening on our territorial jurisdiction … remote control CM/Home minister @BhagwantMann a mute spectator - shameful ! pic.twitter.com/xrUMlyXI9P
— Navjot Singh Sidhu (@sherryontopp) February 16, 2024
ಗುರುವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ರೈತರ ಪ್ರತಿಭಟನೆ ವೇಳೆ ಅಶ್ರುವಾಯು ಶೆಲ್ ದಾಳಿ ಬಗ್ಗೆ ಖಂಡಿಸಿದ ಸಿಧು, ಹೇಡಿತನ ಇದು ಇದು ನಮ್ಮ ಪ್ರಾದೇಶಿಕ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ರಿಮೋಟ್ ಕಂಟ್ರೋಲ್ ಸಿಎಂ ಭಗವಂತ್ ಮಾನ್ /ಗೃಹಸಚಿವರು ಮೂಕ ಪ್ರೇಕ್ಷಕರಾಗಿದ್ದಾರೆ ಅದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.