ಹ್ಯಾಟ್ರಿಕ್ ಸೋಲಿನ ಬಳಿಕ ಹಾರ್ಧಿಕ್ ಪಾಂಡ್ಯಾ ನಾಯಕತ್ವದಿಂದ ಕೆಳಗಿಳಿದು ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ.?
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024ರಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ ಆರಂಭಿಕ ಮೂರು ಪಂದ್ಯಗಳನ್ನು ಸೋತು, ಹ್ಯಾಟ್ರಿಕ್ ಸೋಲಿನ ನೋವನ್ನು ಅನುಭವಿಸುತ್ತಿದೆ. ಹೀಗಾಗಿಯೇ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನೆಗಳು ಎದ್ದಿವೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತ ಬಳಿಕ ಮತ್ತೆ ರೋಹಿತ್ ಶರ್ಮಾ ನಾಯಕರಾಗುತ್ತಾರೆ ಎಂಬ ಸುದ್ದಿ ಹರೆದಾಡುತ್ತಿದೆ. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಮುಂಬೈ ಮ್ಯಾನೇಜ್ಮೆಂಟ್ ಇನ್ನು ಯಾವುದೇ ಸ್ಪಷ್ಟನೇ ನೀಡಿಲ್ಲ. ಅಂದರೆ ಹಾರ್ದಿಕ್ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಹಾರ್ದಿಕ್ ನಾಯಕ: ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಅನುಭಿಸಿದ ಮಾತ್ರಕ್ಕೆ ಹಾರ್ದಿಕ್ ಪಾಂಡ್ಯರನ್ನು ನಾಯಕತ್ವದಿಂದ ಕೆಳಗೆ ಇಳಿಸಬೇಕು ಎಂದು ಕೂಗು ಕೇಳಿ ಬಂದಿದೆ. ಮುಂಬೈ ಇಂಡಿಯನ್ಸ್ ಭವಿಷ್ಯದ ಬಗ್ಗೆ ಯೋಚನೆ ಮಾಡುವ ತಂಡ. ರೋಹಿತ್ ಶರ್ಮಾ ಅವರಿಗೆ 36 ವರ್ಷಗಳು ಆಗಿವೆ. ಇನ್ನು ಹೆಚ್ಚೆಂದರೆ ಇವರು ನಾಲ್ಕು ವರ್ಷ ಆಡಬಹುದು. ಮುಂದೆನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿಯೆ ತಮ್ಮ ತಂಡದಲ್ಲೇ ಪಳಗಿದ ಹಾರ್ದಿಕ್ ಪಾಂಡ್ಯರಿಗೆ ಮುಂಬೈ ಇಂಡಿಯನ್ಸ್ ಗಾಳ ಹಾಕಿತು. ಹಾರ್ದಿಕ್‌ಗೆ ಈಗ 30 ವರ್ಷ ಇನ್ನು ಎಂಟು ವರ್ಷವಾದರೂ ಆಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಹೀಗಾಗಿಯೇ ಮುಂಬೈ ಈ ಆಟಗಾರನ ಮೇಲೆ ಬೆಟ್ ಮಾಡಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಅಷ್ಟು ಭಾರೀ ಮೊತ್ತಕ್ಕೆ ಖರೀದಿಸಲು ಕಾರಣವೇ ಇವರನ್ನು ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಘೋಷಿಸುವುದೇ ಆಗಿತ್ತು. ಆದರೆ ಈ ನಿಟ್ಟಿನಲ್ಲಿ ಅಭಿಮಾನಿಗಳು ಸಹ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೊಂಚ ಹಿಂದೆ ಬಿದ್ದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡೇ ಇಲ್ಲ ಎಂದು ಅಲ್ಲ. ಅವರು ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದರು ಎಂಬುದೇ ಎಲ್ಲರ ಮೆಚ್ಚುಗೆ ಪಾತ್ರವಾಗುವ ಅಂಶ. ಪ್ರತಿಯೊಬ್ಬ ಪ್ಲೇಯರ್‌ಗೆ ತನ್ನ ರೋಲ್ ತಿಳಿಸುತ್ತಿದ್ದರು. ಅಲ್ಲದೆ ಫ್ರಂಟ್‌ನಲ್ಲಿ ತಾವು ಸಹ ಆ ರೋಲ್ ಸರಿಯಾಗಿ ನಿಭಾಯಿಸುತ್ತಿದ್ದರು. ಇದರಿಂದಾಗಿ ಮುಂಬೈ ಐದು ಬಾರಿ ಚಾಂಪಿಯನ್ ಆಗಲು ಸಹಾಯವಾಗಿದೆ.
ಆರಂಭದಲ್ಲೇ ರೋಹಿತ್ ಸೋಲು ಕಂಡಿದ್ದಾರೆ: 2014ರಲ್ಲಿ ಸತತ ಐದು ಪಂದ್ಯಗಳನ್ನು ಸೋತಿದ್ದ ಇಂಡಿಯನ್ಸ್, 2015ರಲ್ಲೂ ಆರಂಭದಲ್ಲಿ ನಾಲ್ಕೂ ಪಂದ್ಯಗಳನ್ನು ಸೋತರೂ ಫೈನಲ್ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. 2018ರಲ್ಲೂ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಮುಂದಾಳತ್ವದಲ್ಲೇ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಟೂರ್ನಿಯಲ್ಲಿ ಮುಂಬೈ ಪ್ಲೇ ಆಫ್ ಪ್ರವೇಶಿಸುವಲ್ಲಿ ಮುಂಬೈ ವಿಫಲಾಗಿತ್ತು. 2022ರಲ್ಲಿ ಮುಂಬೈ ಇಂಡಿಯನ್ಸ್ ಸತತವಾಗಿ ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಸತತ 11 ವರ್ಷಗಳ ಕಾಲ ಮುಂಬೈ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿದರು. ಇವರ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಐದು ಬಾರಿ ಚಾಂಪಿಯನ್ ತಂಡದ ಪ್ರದರ್ಶನ ಮ್ಯಾನೇಜ್ಮೆಂಟ್ ತಲೆ ಕೆಡಿಸಿತ್ತು. ಆಗಲೇ ಅವರಿಗೆ ನಾಯಕತ್ವದ ಬದಲಾವಣೆಯ ಚಿಂತನೆ ಜೀವ ಬಂದಿರಹಬಹುದು.
ಹಾರ್ದಿಕ್‌ರನ್ನೇ ಟ್ರೇಡ್ ಮಾಡಿದ್ದು ಏಕೆ? ಒಂದು ತಂಡ ಅಂದರೆ ಎಲ್ಲರನ್ನೂ ಒಟ್ಟಾಗಿ ಇಟ್ಟುಕೊಳ್ಳುವುದಾಗಿರುತ್ತದೆ. ಒಂದು ತಂಡ ಒಬ್ಬ ಪ್ಲೇಯರ್‌ಗೆ ಗಾಳ ಹಾಕುತ್ತದೆ ಎಂದರೆ, ಮ್ಯಾನೇಜ್ಮೆಂಟ್ ಅವರನ್ನು ನಮ್ಮ ಡ್ರೆಸ್ಸಿಂಗ್ ರೂಮ್‌ಗೆ ಕರೆತಂದರೆ ಹೇಗಿರುತ್ತದೆ ವಾತಾವರಣ ಎಂಬ ಬಗ್ಗೆ ಕಲ್ಪನೆ ಇದ್ದೇ ಇರುತ್ತದೆ. ಹಾರ್ದಿಕ್ ಪಾಂಡ್ಯ ಅವರಿಗೆ ಈಗಾಗಲೇ ಮುಂಬೈ ಇಂಡಿಯನ್ಸ್ ನಲ್ಲಿ ಆಡಿದ್ದರಿಂದ ಅವರಿಗೆ ಈ ತಂಡ ಚಿರ ಪರಿಚಿತ. ಇನ್ನು ಹಾರ್ದಿಕ್ ಸತತವಾಗಿ ತಾವು ಪ್ರತಿನಿಧಿಸುವ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಈ ಎಲ್ಲ ಅಂಶಗಳೇ ಅವರನ್ನು ಟ್ರೇಡ್ ಮಾಡಲು ಸಹಾಯಕವಾಯಿತು.
ಈ ಒಂದು ಆವೃತ್ತಿ ಹಾರ್ದಿಕ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬ ನಂಬಿಕೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ ಈ ಬಾರಿ ಸ್ಥಿರ ಪ್ರದರ್ಶನ ನೀಡದೆ ಇದ್ದರೂ, ಮುಂದಿನ ಬಾರಿ ತಂಡ ಭರ್ಜರಿ ಕಮ್‌ಬ್ಯಾಕ್ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತದೆ.